ತಮ್ಮನ್ನು 2-3 ಬಾರಿ ಆರಿಸಿ ಕಳಿಸಿದರೂ ಜನರಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ದೇವೇಗೌಡರ ಕುಟುಂಬ ಮಾಡಲಿಲ್ಲ: ಡಿಕೆ ಸುರೇಶ್

|

Updated on: Apr 02, 2024 | 6:34 PM

ವೇದಿಕೆ ಮೇಲೆ ಮತ್ತು ನೆರೆದ ಜನರಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರಿಗಾಗಿ ಕೆಲಸ ಮಾಡಿದ ಜನರಿದ್ದಾರೆ, ಕ್ಷೇತ್ರಕ್ಕೆ ಆ ಕುಟುಂಬದಿಂದ ಆಗಿರುವ ಪ್ರಯೋಜನದ ಬಗ್ಗೆ ಅವರೇ ಹೇಳಲಿ ಎಂದು ಸುರೇಶ್ ಹೇಳಿದರು. ಆದರೆ, ಕಳೆದ 10 ವರ್ಷ ಮತ್ತು 8 ತಿಂಗಳ ಅವಧಿಯಲ್ಲಿ ತಾನು ಪ್ರತಿ ತಿಂಗಳು ಸಭೆ ನಡೆಸಿ ಜನರ ಕಷ್ಟಸುಖ ವಿಚಾರಿಸುವ ಪ್ರಯತ್ನ ಮಾಡಿದ್ದೇನೆ ಅಂತ ಹೆಮ್ಮಯಿಂದ ಹೇಳಿಕೊಳ್ಳುವುದಾಗಿ ಸುರೇಶ್ ಹೇಳಿದರು.

ಆನೇಕಲ್: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಇಂದು ಆನೇಕಲ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಾಡಿದ ಅವರು ಹೆಚ್ ಡಿ ದೇವೇಗೌಡ (HD Devegowda) ಕುಟುಂಬದ ಸದಸ್ಯರನ್ನು 2-3 ಸಲ ಆರಿಸಿ ಕಳಿಸಿದಾಗ್ಯೂ ಅವರು ಜನರಿಗೆ ಕೃತಜ್ಞತೆ (gratitude) ಸಲ್ಲಿಸುವುದಕ್ಕಾಗಿ ಒಂದೇ ಒಂದು ಜನಪರ ಯೋಜನೆ ಜಾರಿಗೆ ತರಲಿಲ್ಲ ಎಂದು ಸುರೇಶ್ ಹೇಳಿದರು. ಜಿಲ್ಲೆಯ ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನ ಗೆಲ್ಲಿಸಿದ್ದಕ್ಕೆ ಬದಲಾಗಿ ಏನನ್ನೂ ಅವರಿಗೆ ನೀಡಲಿಲ್ಲ, ಒಂದೇ ಒಂದು ಸಭೆ ನಡೆಸಿ ಅವರ ಕಷ್ಟಸುಖ ವಿಚಾರಿಸಲಿಲ್ಲ ಎಂದು ಸುರೇಶ್ ಹೇಳಿದರು. ವೇದಿಕೆ ಮೇಲೆ ಮತ್ತು ನೆರೆದ ಜನರಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರಿಗಾಗಿ ಕೆಲಸ ಮಾಡಿದ ಜನರಿದ್ದಾರೆ, ಕ್ಷೇತ್ರಕ್ಕೆ ಆ ಕುಟುಂಬದಿಂದ ಆಗಿರುವ ಪ್ರಯೋಜನದ ಬಗ್ಗೆ ಅವರೇ ಹೇಳಲಿ ಎಂದು ಸುರೇಶ್ ಹೇಳಿದರು. ಆದರೆ, ಕಳೆದ 10 ವರ್ಷ ಮತ್ತು 8 ತಿಂಗಳ ಅವಧಿಯಲ್ಲಿ ತಾನು ಪ್ರತಿ ತಿಂಗಳು ಸಭೆ ನಡೆಸಿ ಜನರ ಕಷ್ಟಸುಖ ವಿಚಾರಿಸುವ ಪ್ರಯತ್ನ ಮಾಡಿದ್ದೇನೆ ಅಂತ ಹೆಮ್ಮಯಿಂದ ಹೇಳಿಕೊಳ್ಳುವುದಾಗಿ ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್​ಡಿ ದೇವೇಗೌಡ