ಮೈಸೂರು: ಸಫಾರಿ ವೇಳೆ ಒಂದೆರಡಲ್ಲ, ಮೂರು ಹುಲಿಗಳ ದರ್ಶನ! ಪ್ರವಾಸಿಗರಿಗೆ ಧಮಾಕ; ವಿಡಿಯೋ ನೋಡಿ

| Updated By: ganapathi bhat

Updated on: Apr 02, 2022 | 9:17 AM

ಸಾಲು ಸಾಲು ರಜೆ ಹಿನ್ನೆಲೆ ಕಾಡಿನತ್ತ ಪ್ರವಾಸಿಗರು ದಂಡು ಜೋರಾಗಿ ಮುಖ ಮಾಡಿವೆ. ಯುಗಾದಿ ಹಬ್ಬದ ಬಂಪರ್ ಕಾರಣ ಹಲವು ಮಂದಿ ಕಾಡಿನತ್ತ ಮುಖ ಮಾಡಿದ್ದಾರೆ. ವಿಶೇಷ ಎಂದರೆ ಹಲವರಿಗೆ ಸಫಾರಿ ವೇಳೆ ಒಂದಲ್ಲ‌ ಎರಡಲ್ಲ ಮೂರು ಹುಲಿಗಳ ದರ್ಶನವಾಗಿದೆ!

ಮೈಸೂರು: ಇಲ್ಲಿನ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಬಳಿ ಸಫಾರಿ ವೇಳೆ ಹುಲಿಗಳು ಪ್ರತ್ಯಕ್ಷವಾಗಿವೆ. ನೀರು ಕುಡಿಯುತ್ತಿದ್ದ ಒಂದು ಹುಲಿ, ಸಫಾರಿ ರಸ್ತೆ ಬಳಿಯೇ ಬಂದಿದ್ದ ಮತ್ತೊಂದು ಹುಲಿ, ಕಾಡಿನ ರಸ್ತೆಯಲ್ಲಿ ನಿಂತಿದ್ದ ಮೂರನೇ ಹುಲಿ ಜನರ ಕಣ್ಣಿಗೆ ಕಾಣಸಿಕ್ಕಿವೆ. ಸಾಲು ಸಾಲು ರಜೆ ಹಿನ್ನೆಲೆ ಕಾಡಿನತ್ತ ಪ್ರವಾಸಿಗರು ದಂಡು ಜೋರಾಗಿ ಮುಖ ಮಾಡಿವೆ. ಯುಗಾದಿ ಹಬ್ಬದ ಬಂಪರ್ ಕಾರಣ ಹಲವು ಮಂದಿ ಕಾಡಿನತ್ತ ಮುಖ ಮಾಡಿದ್ದಾರೆ. ವಿಶೇಷ ಎಂದರೆ ಹಲವರಿಗೆ ಸಫಾರಿ ವೇಳೆ ಒಂದಲ್ಲ‌ ಎರಡಲ್ಲ ಮೂರು ಹುಲಿಗಳ ದರ್ಶನವಾಗಿದೆ!

ಕಬಿನಿ ಹಿನ್ನೀರಿನ ಸಫಾರಿ ವೇಳೆ ಹುಲಿಗಳು ಕಾಣಿಸಿಕೊಂಡಿವೆ. ಪ್ರವಾಸಿಗ ವಿನಯ್ ಮೊಬೈಲ್‌ ಕ್ಯಾಮರಾದಲ್ಲಿ ಹುಲಿಗಳ ವಿಡಿಯೋ ಸೆರೆಯಾಗಿದೆ. ಒಟ್ಟು ಮೂರು ಕಡೆ ಹುಲಿಗಳು ಕಾಣಿಸಿಕೊಂಡಿದೆ. ನೀರು ಕುಡಿಯುತ್ತಿದ್ದ ಒಂದು ಹುಲಿ, ಸಫಾರಿ ರಸ್ತೆಯ ಬಳಿ ಬಂದಿದ್ದ ಮತ್ತೊಂದು ಹುಲಿ, ಕಾಡಿನ ರಸ್ತೆಯಲ್ಲಿ ನಿಂತಿದ್ದ ಮೂರನೇ ಹುಲಿ ಕಂಡು ಪ್ರವಾಸಿಗರು ಪುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಚೆನ್ನೈ ಸಂಪರ್ಕಿಸಿರೋ ಎಕ್ಸ್‌ಪ್ರೆಸ್‌ ಹೈವೇ ಕಾಮಗಾರಿಯಿಂದಾಗಿ ಕಾಡು ಪ್ರಾಣಿಗಳಿಗೆ ಎದುರಾಯ್ತು ಸಂಕಷ್ಟ

ಇದನ್ನೂ ಓದಿ: ಹಾಸನದಲ್ಲಿ ಚಿರತೆಯೊಂದಿಗೆ ಕಾದಾಡಿ ಗೆದ್ದ ಸಾಕು ನಾಯಿ; ವಿಡಿಯೋ ನೋಡಿ

Follow us on