ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಸಿಕ್ಕಿ ಬಿದ್ದ ಬುರ್ಖಾ ಧರಿಸಿದ್ದ ಮಹಿಳೆಯರು

| Updated By: ರಮೇಶ್ ಬಿ. ಜವಳಗೇರಾ

Updated on: Oct 21, 2024 | 5:57 PM

ಮಹಿಳೆಯರಿಗೆ ಅನುಕೂಲವಾಗಲೆಂದು ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಮಹಿಳೆಯರು ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದ್ದು, ಕಂಡಕ್ಟರ್​ಗೆ ಆಧಾರ್ ಕಾರ್ಡ್​ ತೋರಿಸುವುದು ಕಡ್ಡಾಯವಾಗಿದೆ. ಆದ್ರೆ, ಬಾಗಕೋಟೆಯಲ್ಲಿ ಬುರ್ಖಾ ಧರಿಸಿದ್ದ ಮೂವರು ಮಹಿಳೆಯರು ಒಂದೇ ಆಧಾರ್​​ ತೋರಿಸಿ ಫ್ರೀ ಟಿಕೆಟ್ ಪಡೆದುಕೊಂಡಿದ್ದಾರೆ. ಬಳಿಕ ಟಿಸಿ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಾಗಲಕೋಟೆ, (ಅಕ್ಟೋಬರ್ 21): ಒಂದೇ ಆಧಾರ್​ ಕಾರ್ಡ್​ ತೋರಿಸಿ ಮೂವರು ಪ್ರಯಾಣಿಸುತ್ತಿದ್ದ ಮಹಿಳೆಯರು ಟಿಸಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಬಳಿ ಘಟನೆ ನಡೆದಿದೆ. ಬಾಗಲಕೋಟೆಯಿಂದ ಬೆಳಗಾವಿಗೆ ಹೊರಟಿದ್ದ ಮೂವರು ಬುರ್ಖಾ ಧರಿಸಿದ್ದ ಮಹಿಳೆರು ಒಂದೇ ಒಂದೇ ಆಧಾರ್ ಕಾರ್ಡ್​ ತೋರಿಸಿ ಬಸ್​ ಟಿಕೆಟ್​ ಪಡೆದುಕೊಂಡಿದ್ದಾರೆ. ಬಳಿಕ ಮಾರ್ಗ ಮಧ್ಯ ಟಿಸಿ ಟಿಕೆಟ್​ ​ತಪಾಸಣೆ ಮಾಡುವಾಗ ಮೂವರು ಮಹಿಳೆಯರು ಒಂದೇ ಕಾರ್ಡ್​ ತೋರಿಸಿದ್ದಾರೆ. ಇದರಿಂದ ಗರಂ ಆದ ಟಿಸಿ  ಮಹಿಳೆಯರಿಗೆ ಕ್ಲಾಸ್ ತೆಗೆದುಕೊಂಡಿದ್ದು, 500 ರೂ. ದಂಡ ಪಾವತಿಸುವಂತೆ ಹೇಳಿದ್ದಾರೆ. ಇಲ್ಲದಿದ್ದರೇ ಮೂವರ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.