ಎಮ್ಮೆಲ್ಸಿ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ, ವಿಪಕ್ಷ ನಾಯಕ ಅರ್ ಅಶೋಕ ಹೇಳೋದೇನು?
ಚನ್ನಪಟ್ಟಣ ಯಾವತ್ತಿಗೂ ಜೆಡಿಎಸ್ ಭದ್ರಕೋಟೆ ಮತ್ತು ಕುಮಾರಸ್ವಾಮಿಯವರಿಗೆ ಸಂಬಂಧಿಸಿದ ಕ್ಷೇತ್ರ; ಹಾಗಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಅವರಿಗೆ ಸಹಜವಾಗೇ ಇರುತ್ತದೆ, ತಮ್ಮ ಪಕ್ಷದ ಸಭೆಯಲ್ಲಿ ಜೆಡಿಎಸ್ ನಿಂದ ಯೋಗೇಶ್ವರ್ ಗೆ ಟಿಕೆಟ್ ಕೊಡುವ ಮಾತನ್ನು ಅವರಾಡಿದ್ದಾರೆ ಮತ್ತು ಬಿಜೆಪಿ ಸಹ ಯೋಗೇಶ್ವರ್ಗೆ ಟಿಕೆಟ್ ನೀಡುವ ಅಭಿಪ್ರಾಯ ಹೊಂದಿದೆ ಎಂದು ಅಶೋಕ ಹೇಳಿದರು.
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ವಿಧಾನ ಪರಿಷತ್ ಸದಸ್ಯ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ್ ತಮ್ಮ ನಾಯಕರಿಗೆ ಗೂಗ್ಲಿ ಎಸೆದರೇ? ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳುವ ಪ್ರಕಾರ ಯೋಗೇಶ್ವರ್ ಪರಿಷತ್ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗುತ್ತಿದ್ದಾರೆ. ಅವರು ಯಾಕೆ ಇಂಥ ನಿರ್ಣಯ ತೆಗೆದುಕೊಂಡರೋ ಗೊತ್ತಾಗುತ್ತಿಲ್ಲ, ತಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ, ಇನ್ನೂ 4 ದಿನಗಳ ಸಮಯಾವಕಾಶವಿದೆ, ಯಾವುದನ್ನೂ ಈಗಲೇ ಹೇಳುವುದು ಸಾಧ್ಯವಿಲ್ಲ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೆಡಿಎಸ್ಗೆ ಬಿಗ್ ಶಾಕ್: ಬಿಜೆಪಿಗೆ ರಾಜೀನಾಮೆ ನೀಡದೇ ಪಕ್ಷೇತರವಾಗಿ ಸ್ಪರ್ಧೆ ಎಂದ ಯೋಗೇಶ್ವರ್
Latest Videos