ಈ ವರ್ಷ ಹಾಸನಾಂಬೆಗೆ ಬರೋಬ್ಬರಿ 25 ಕೋಟಿ ರೂ. ಆದಾಯ: ಯಾವುದರಿಂದ ಎಷ್ಟು?

Updated on: Oct 24, 2025 | 6:25 PM

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬ ದರ್ಶನೋತ್ಸವ ಅಂತ್ಯವಾಗಿದ್ದು, ಈಗಾಗಲೇ ಗರ್ಭಗುಡಿಯನ್ನು ಬಂದ್ ಮಾಡಲಾಗಿದೆ. ಇನ್ನು ಕಳೆದ ಇಂದು (ಅಕ್ಟೊಬರ್ 24) ನಡೆದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದ್ದು. ಹುಂಡಿಯಲ್ಲೇ ಬರೋಬ್ಬರಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂ. ಸಂಗ್ರಹವಾಗಿದೆ. ಇದರೊಂದಿಗೆ 1000 ರೂ. ಟಿಕೆಟ್, 300 ರೂ. ಟಿಕೆಟ್, ಲಾಡು ಪ್ರಸಾದದಿಂದ ದೇವಸ್ಥಾನಕ್ಕೆ ಒಟ್ಟು 25,59,87,327 (25 ಕೋಟಿ) ಆದಾಯ ಹರಿದುಬಂದಿದೆ ಎಂದು ಎಸಿ ಹಾಗೂ ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.

ಹಾಸನ, (ಅಕ್ಟೋಬರ್ 24): ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬ ದರ್ಶನೋತ್ಸವ ಅಂತ್ಯವಾಗಿದ್ದು, ಈಗಾಗಲೇ ಗರ್ಭಗುಡಿಯನ್ನು ಬಂದ್ ಮಾಡಲಾಗಿದೆ. ಇನ್ನು ಕಳೆದ ಇಂದು (ಅಕ್ಟೊಬರ್ 24) ನಡೆದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದ್ದು. ಹುಂಡಿಯಲ್ಲೇ ಬರೋಬ್ಬರಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂ. ಸಂಗ್ರಹವಾಗಿದೆ. ಇದರೊಂದಿಗೆ 1000 ರೂ. ಟಿಕೆಟ್, 300 ರೂ. ಟಿಕೆಟ್, ಲಾಡು ಪ್ರಸಾದದಿಂದ ದೇವಸ್ಥಾನಕ್ಕೆ ಒಟ್ಟು 25,59,87,327 (25 ಕೋಟಿ) ಆದಾಯ ಹರಿದುಬಂದಿದೆ ಎಂದು ಎಸಿ ಹಾಗೂ ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.

ಟಿಕೆಟ್, ಪ್ರಸಾದ ಮಾರಾಟದಿಂದ 21,91,75,052 ರೂಪಾಯಿ ಬಂದಿದ್ದರೆ, ಹಾಸನಾಂಬೆ ದೇವಸ್ಥಾನದ ಹುಂಡಿ ಹಣ ಸೇರಿ 25,59,87,327 ಸಂಗ್ರಹವಾಗಿದೆ. ಇನ್ನು ಹಾಸನಾಂಬೆಗೆ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ಸಹ ಬಂದಿದೆ.ಹಾಗೇ ವಿವಿಧ ದೇಶಗಳ ಕರೆನ್ಸಿ ಜೊತೆಗೆ ಅಮಾನ್ಯೀಕರಣಗೊಂಡಿರುವ ನೋಟುಗಳನ್ನು ಸಹ ಹುಂಡಿಗೆ ಹಾಕಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More