ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಅರಣ್ಯಪ್ರದೇಶದಲ್ಲಿ ಸಫಾರಿ ಮಾಡುತ್ತಿದ್ದ ಪ್ರವಾಸಿಗರಿಗೆ ಕ್ಯಾರೆ ಅನ್ನದ ಹುಲಿರಾಯ

Updated on: Jun 12, 2025 | 10:31 AM

ಕಲ್ಯಾಣಗಿರಿಯ ನಿವಾಸಿ ಅಕ್ಬರ್ ಅಲಿ ಹುಲಿರಾಯನ ಭವ್ಯ ಮತ್ತು ನಿರ್ಭೀತ ನಡೆದಾಟವನ್ನು ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಅಕ್ಬರ್ ಹುಲಿಯ ಮುಂದಿರುವ ವಾಹನದಲ್ಲಿ ಕುಳಿತು ಹುಲಿಯ ವಿಡಿಯೋಗ್ರಾಫಿ ಮಾಡಿದ್ದಾರೆ. ಅಂದರೆ ಮುಂದೆಯೂ ವಾಹನಗಳು ಹಿಂದೆಯೂ ವಾಹನಗಳು. ಮಧ್ಯಭಾಗದಲ್ಲಿ ದಮ್ಮನಕಟ್ಟೆ ಹುಲಿಯ ಮೈ ರೋಮಾಂಚನಗೊಳಿಸುವ ನಡಿಗೆ!

ಮೈಸೂರು, ಜೂನ್ 12: ನೀವು ಎಷ್ಟೇ ಲಕ್ಷ ಅಥವಾ ಕೋಟಿ ರೂಪಾಯಿಗಳ ವಾಹನದಲ್ಲಿ ಸಫಾರಿಗೆ ಅಂತ ಕಾಡಿಗೆ ಹೋದರೂ ಕಾಡಿನ ರಾಜ (king of forest) ಮಾತ್ರ ಹುಲಿ ಅಂತ ಈ ವಿಡಿಯೋ ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೈಸೂರ ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಅರಣ್ಯಪ್ರದೇಶದಲ್ಲಿ ಸಫಾರಿಗೆಂದು ಹೋದ ಪ್ರವಾಸಿಗರಿಗೆ ಹುಲಿರಾಯ ಎದುರಾಗಿದ್ದಾನೆ. ರಸ್ತೆಯ ಒಂದು ಬದಿಯಲ್ಲಿ ಹುಲಿ ತನ್ನ ಸಹಜ ಗತ್ತಿನಲ್ಲಿ ಗಂಭೀರವಾಗಿ ನಡೆದು ಬರುತ್ತಿರುವುದನ್ನು ನೋಡುತ್ತಿದ್ದರೆ ವನ್ಯಜೀವಿ ಬಗ್ಗೆ ಅಕ್ಕರೆ ಹುಟ್ಟುತ್ತದೆ. ಅದು ತನ್ನ ಹಿಂದೆ ಬರುತ್ತಿರುವ ವಾಹನಗಳಿಗೆ ಸೈಡ್ ನೀಡುತ್ತಿಲ್ಲ! ನನ್ನ ಹಾದಿ ನನ್ನದು, ನನ್ನ ನಡಿಗೆ ನನ್ನದು, ಈ ಕಾಡು ಕೂಡ ನನ್ನದು ಅನ್ನುವಂತಿದೆ ಹುಲಿಯ ಗತ್ತು.

ಇದನ್ನೂ ಓದಿ:  ದಮ್ಮನಕಟ್ಟೆ ಸಫಾರಿಯಲ್ಲಿ ವಾಹನದ ಎದುರು ಹುಲಿ ಕಂಡ ಪ್ರವಾಸಿಗರಿಗೆ ಅತಂಕಮಿಶ್ರಿತ ರೋಮಾಂಚನ! ವನ್ಯಮೃಗದ ಗೊಂದಲ ಕೆಮೆರಾದಲ್ಲಿ ಸೆರೆ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ