ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಅಂತ ಹೋದವರನ್ನು ಹುಲಿರಾಯ ಮರದ ಮೇಲೆ ನಿಂತು ಸ್ವಾಗತಿಸಿದ!

ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಅಂತ ಹೋದವರನ್ನು ಹುಲಿರಾಯ ಮರದ ಮೇಲೆ ನಿಂತು ಸ್ವಾಗತಿಸಿದ!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 02, 2023 | 10:58 AM

ಹುಲಿಗಳು ಮರ ಹತ್ತುತ್ತವೆ, ಕೆಲ ಸಲ ತಮ್ಮ ಬೇಟೆಯನ್ನು ಸಹ ಮರದ ಮೇಲೆ ಎಳೆದೊಯ್ದು ಭಕ್ಷಿಸುವುದುಂಟು. ಆದರೆ ಈ ಹುಲಿ ಹೊತ್ತು ಕಳೆಯಲು ಮರ ಹತ್ತಿರುವಂತಿದೆ. ಸಫಾರಿಯಲ್ಲಿದ್ದ ಜನ ತನ್ನನ್ನು ನೋಡುತ್ತಿದ್ದಾರೆ ಎಂಬ ಸಂಪೂರ್ಣ ಅರಿವು ಹುಲಿಗಿದೆ.

ಮೈಸೂರು: ತುಂಬಾ ಸುಂದರವಾದ ದೃಶ್ಯವಿದು. ಅರಣ್ಯದ ಸ್ವಚ್ಛ ಮತ್ತು ಪ್ರಶಾಂತ ಪರಿಸರ ಹುಲಿರಾಯನೊಬ್ಬ (tiger) ಮರ ಹತ್ತಿ ತನ್ನ ಸುತ್ತಲಿನ ನೋಟವನ್ನು ಕಣ್ತುಂಬಿಸಿಕೊಳ್ಳುತ್ತಿರುವ ಮನಮೋಹಕ ದೃಶ್ಯ ನಾಗರಹೊಳೆ ಅಭಯಾರಣ್ಯದಲ್ಲಿ  ಸಫಾರಿಗೆಂದು (Safari in Nagarahole) ತೆರಳಿದ್ದ ಪ್ರವಾಸಿಗರಿಗೆ ಸೆರೆ ಸಿಕ್ಕಿದೆ. ಹುಲಿಗಳು ಮರ ಹತ್ತುತ್ತವೆ, ಕೆಲ ಸಲ ತಮ್ಮ ಬೇಟೆಯನ್ನು (prey) ಸಹ ಮರದ ಮೇಲೆ ಎಳೆದೊಯ್ದು ಭಕ್ಷಿಸುವುದುಂಟು. ಆದರೆ ಈ ಹುಲಿ ಹೊತ್ತು ಕಳೆಯಲು ಮರ ಹತ್ತಿರುವಂತಿದೆ. ಸಫಾರಿಯಲ್ಲಿದ್ದ ಜನ ತನ್ನನ್ನು ನೋಡುತ್ತಿದ್ದಾರೆ ಎಂಬ ಸಂಪೂರ್ಣ ಅರಿವು ಹುಲಿಗಿದೆ. ಅವರೆಡೆ ಒಮ್ಮೆ ನೋಡಿ, ಏನ್ರಯ್ಯ, ದೂರ ನಿಂತ್ಕೊಂಡು ಗುರಾಯಿಸ್ತೀದ್ದೀರಾ? ತಾಕತ್ತಿದ್ದರೆ ವಾಹನದಿಂದ ಕೆಳಗಿಳಿದು ಬನ್ನಿ! ಅನ್ನುವಂತೆ ಒಮ್ಮೆ ದೃಷ್ಟಿಸಿ ನೋಡಿ ಅವರು ಬರಲಾರರು ಅನ್ನೋದು ಖಾತ್ರಿಯಾದ ಮೇಲೆ ತನ್ನ ನೋಟ ಬದಲಾಯಿಸುತ್ತಾ ಮರದ ಕೊಂಬೆಯ ಮೇಲೆ ಕೊಂಚ ಮುಂದೆ ಸಾಗುತ್ತದೆ. ಹುಲಿಗಳು ಚಿರತೆಗಳಂತೆ ಊರೊಳಗೆ ಹೆಚ್ಚು ಕಾಣಿಸಲ್ಲ, ಅಪರೂಪಕ್ಕೊಮ್ಮೆ ಊರೊಳಗೆ ಬರುತ್ತವೆ. ಹಾಗಾಗಿ, ಈ ಸುಂದರ ಪ್ರಾಣಿಗಳನ್ನು ಕಾಡಿನಲ್ಲಿ ನೋಡುವುದು ಒಂದು ವಿಶಿಷ್ಟ ಅನುಭವ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 02, 2023 10:58 AM