ದಾವಣಗೆರೆ: ಮಳೆಗಾಗಿ ದುಗ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ವರ್ತಕರು

| Updated By: ಆಯೇಷಾ ಬಾನು

Updated on: May 21, 2024 | 1:13 PM

ಸಮೃದ್ಧ ಮಳೆ ಬೆಳೆಗಾಗಿ ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ದಾವಣಗೆರೆ ಪರ್ಟಿಲೈಸರ್ (ರಸಗೊಬ್ಬರ ) ವರ್ತಕರ ಸಂಘದಿಂದ ಕರಿಗಲ್ಲು ಪೂಜೆ ಮಂತ್ರ ಸ್ತೋತ್ರಗಳೊಂದಿಗೆ ದೇವಿ ಆರಾಧಿಸಿ ಪೂಜೆ ಸಲ್ಲಿಸಲಾಯಿತು.ಈ ಬಾರಿ ಉತ್ತಮ ಮಳೆಯಾಗುವ ಸೂಚನೆ ಇದೆ. ನಾಡಿಗೆ ಉತ್ತಮ‌ ಮಳೆ ಬೆಳೆ ಆಗಲಿ ಸಮೃದ್ದಿ‌‌ ನೆಲಸಲಿ ಎಂದು ಪ್ರಾರ್ಥಿಸಲಾಗಿದೆ.

ದಾವಣಗೆರೆ, ಮೇ.21: ಬೆಳಿಗ್ಗೆಯಿಂದಲೇ ದಾವಣಗೆರೆಯಲ್ಲಿ ಸಮೃದ್ಧ ಮಳೆ ಬೆಳೆಗಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಿ ಕರಿಗಲ್ಲು ಪೂಜೆ ಕಾರ್ಯಕ್ರಮ ನಡೆಯಿತು. ದಾವಣಗೆರೆ ಪರ್ಟಿಲೈಸರ್ (ರಸಗೊಬ್ಬರ ) ವರ್ತಕರ ಸಂಘದಿಂದ ಕರಿಗಲ್ಲು ಪೂಜೆ ಮಂತ್ರ ಸ್ತೋತ್ರಗಳೊಂದಿಗೆ ದೇವಿ ಆರಾಧಿಸಿ ಪೂಜೆ ಸಲ್ಲಿಸಲಾಯಿತು. ವರ್ತಕರಿಂದ ಕರಿಗಲ್ಲಿಗೆ ಪೂಜೆ ಸಲ್ಲಿಸಿ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಕಳೆದ ವರ್ಷ ಬರಗಾಲವಿತ್ತು. ಈ ಬಾರಿ ಉತ್ತಮ ಮಳೆಯಾಗುವ ಸೂಚನೆ ಇದೆ. ನಾಡಿಗೆ ಉತ್ತಮ‌ ಮಳೆ ಬೆಳೆ ಆಗಲಿ ಸಮೃದ್ದಿ‌‌ ನೆಲಸಲಿ ಎಂದು ಪೂಜೆ ಸಲ್ಲಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: May 21, 2024 01:11 PM