ಚಿಕ್ಕಬಳ್ಳಾಪುರ: ನಂದಿ ಹಿಲ್ಸ್ ಹೋಗುವ ಪ್ರವಾಸಿಗರಿಗೆ ನಿರಾಸೆ, ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ರವಿವಾರ ರಜೆ ಹಿನ್ನೆಲೆಯಲ್ಲಿ ಜಾಲಿಯಾಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರು ಹೋಗುತ್ತಿದ್ದಾರೆ. ಆದರೆ ಪ್ರವಾಸಿಗರಿಗೆ ದಾರಿ ಮಧ್ಯೆ ನಿರಾಸೆ ಕಾದಿದೆ. ಬೆಟ್ಟದ ಮೇಲೆ ಹೋಗಲು ಆಗದೆ ಮತ್ತು ಬೆಟ್ಟದ ಮೇಲೆ ಹೋದವರು ಕೆಳಗೆ ಬರಲು ಆಗದೆ ಪರದಾಡಿದರು. ಇದಕ್ಕೆ ಕಾರಣವೇನು? ಈ ವಿಡಿಯೋ ನೋಡಿ.
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ಪ್ರವಾಸಕ್ಕೆ ತೆರಳುತ್ತಿದ್ದಾರೆ. ಕಳೆದ 2-3 ದಿನಗಳಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ (Nandi Hills) ಸಾಕಷ್ಟು ಜನರು ತೆರಳುತ್ತಿದ್ದಾರೆ. ರವಿವಾರ ಬೆಳ್ಳಂ ಬೆಳಗ್ಗೆ ನಂದಿಗಿರಿಧಾಮಕ್ಕೆ ತೆರಳುತ್ತಿದ್ದ ಜನರಿಗೆ ನಿರಾಸೆಯಾಗಿದೆ. ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ನಲ್ಲಿ ವಾಹನ ಸವಾರರು ಪರದಾಡಿದರು. ಹೌದು, ನಂದಿಗಿರಿಧಾಮಕ್ಕೆ ತೆರಳುವ ರಸ್ತೆಯಲ್ಲಿ ಮರದ ಟೊಂಗೆ ಬಿದ್ದು ರಸ್ತೆ ಬಂದ್ ಆಗಿದೆ. ಇದರಿಂದ ವಾಹನಗಳು ಬೆಟ್ಟದ ಮೇಲೆ ಹೋಗಲಾಗದೆ, ಕೆಳಗೆ ಬರಲಾಗದೆ ರಸ್ತೆಯಲ್ಲೇ ನಿಂತಿವೆ. ಇದರಿಂದ ಐದಾರು ಕಿಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ನಂದಿಗಿರಿಧಾಮದ ಮೇಲೆ ಹೋಗಲಾಗದೆ ಪ್ರವಾಸಿಗರು ಪರದಾಡುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಪ್ರವಾಸಿಗರು ರಸ್ತೆಯಲ್ಲಿ ಕಾಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ