ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ಮೈಸೂರು ದಸರಾಗೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು, ಗಜಪಡೆ ಈಗಾಗಲೇ ಅರಮನೆ ಅಂಗಳ ತಲುಪಿದೆ. ಮೈಸೂರು ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ತ್ರಿಷಿಕಾ ಕುಮಾರಿ ಒಡೆಯರ್ ಹಣ್ಣು ವಿತರಿಸಿದರು. ಪುತ್ರ ಆದ್ಯವೀರ್ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತೆಯರೊಂದಿಗೆ ಆನೆಗಳಿಗೆ ಬಾಳೆಹಣ್ಣು ತಿನ್ನಿಸಿ, ಸ್ನೇಹಿತೆಯರಿಗೆ ದಸರಾ ಗಜಪಡೆಯ ಪರಿಚಯ ಮಾಡಿಸಿದರು.
ಮೈಸೂರು, ಸೆಪ್ಟೆಂಬರ್ 17: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ರಾಜಮನೆತನದ ತ್ರಿಷಿಕಾ ಕುಮಾರಿ ಒಡೆಯರ್ ಹಣ್ಣು ವಿತರಿಸಿದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ, ಪುತ್ರ ಆದ್ಯವೀರ್ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತೆಯರೊಂದಿಗೆ ಅರಮನೆ ಅಂಗಳಕ್ಕೆ ಭೇಟಿ ನೀಡಿದರು. ಈ ವೇಳೆ ಆನೆಗಳಿಗೆ ಬಾಳೆಹಣ್ಣು ತಿನ್ನಿಸಿ, ಗಜಪಡೆಯ ಪರಿಚಯವನ್ನು ಸ್ನೇಹಿತೆಯರಿಗೆ ಮಾಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
