ದ್ವಿಚಕ್ರವಾಹನ ಕದಿಯುವುದು ವೃತ್ತಿಯಾಗಿಸಿಕೊಂಡಿದ್ದ ಬೈಕ್ ಕಳ್ಳನ ಬಂಧಿಸಿದ ತುಮಕೂರು ಪೊಲೀಸ್
ಆನಂದ್ ಒಬ್ಬ ಹ್ಯಾಬಿಚುಯಲ್ ಅಫೆಂಡರ್ ಅನ್ನೋದು ಗೊತ್ತಾಗಿದೆ. ತುಮಕೂರುಗೆ ಬರುವ ಮೊದಲು ಅವನು ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಬೆಂಗಳೂರಲ್ಲೂ ಬೈಕ್ಗಳನ್ನು ಕದ್ದಿದ್ದ ಮತ್ತು ಮೂರು ಬಾರಿ ಸೆರೆವಾಸ ಅನುಭವಿಸಿದ್ದ. ಬೈಕ್ ಗಳನ್ನು ಕದಿಯುವಾಗ ಅವನು ತುಂಬಾ ಚೂಸಿಯಾಗಿರುತ್ತಿದ್ದ, ಕೇವಲ ಒಳ್ಳೆಯ ಕಂಡೀಷನ್ನಲ್ಲಿರುವ ವಾಹನಗಳನ್ನು ಮಾತ್ರ ಕದಿಯುತ್ತಿದ್ದ
ತುಮಕೂರು, ಮೇ 16: ನಗರದ ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಒಬ್ಬ ಕುಖ್ಯಾತ (notorious) ಬೈಕ್ ಕಳ್ಳನನ್ನು ಬಂಧಿಸಿ ಅವನಿಂದ ಸುಮಾರು ₹11,23,000 ಮೌಲ್ಯಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವಿಕೆ ಹೇಳಿದರು. ಬಂಧಿತ ಕಳ್ಳ ಆಂಧ್ರ ಪ್ರದೇಶ ಮೂಲದವನಾಗಿದ್ದು, 32-ವರ್ಷ ವಯಸ್ಸಿನ ಇವನ ಹೆಸರು ಚಿತ್ತಪ್ಪಗಾರಿ ಆನಂದ್ ಆಗಿದೆ. ರೈಲು ನಿಲ್ದಾಣದ ಮುಂದೆ ಪಾರ್ಕ್ ಮಾಡಿರುತ್ತಿದ್ದ ಸ್ಕೂಟರ್ ಮತ್ತು ಬೈಕ್ಗಳನ್ನು ಕದಿಯುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಕಳೆದ 6 ತಿಂಗಳು ಅವಧಿಯಲ್ಲಿ ಆನಂದ್ 30 ದ್ವಿಚಕ್ರವಾಹನಗಳನ್ನು ಕದ್ದಿದ್ದಾನೆ.
ಇದನ್ನೂ ಓದಿ: ಬ್ಯಾಂಕ್ನಿಂದ ಬೈಕ್ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: May 16, 2025 10:48 AM