ಕೊಲೆ ಕೇಸ್​ನಲ್ಲಿ 11 ವರ್ಷ ಜೈಲು ಶಿಕ್ಷೆ ಹಾಗೂ ದರ್ಶನ್​ ಭೇಟಿ ಬಗ್ಗೆ ಖೈದಿ ಹೇಳಿದ್ದೇನು?

Edited By:

Updated on: Jul 24, 2024 | 7:37 PM

ಕೊಲೆ ಪ್ರಕರಣದಲ್ಲಿ ತುರುವನೂರು ಸಿದ್ದಾರೂಢ ಅವರು ಜೈಲು ಸೇರಿದ್ದರು. ಅವರಿಗೆ 11 ವರ್ಷ ಜೈಲು ಶಿಕ್ಷೆ ಆಗಿತ್ತು. ದರ್ಶನ್​ ಅವರ ಅಭಿಮಾನಿ ಆಗಿರುವ ಸಿದ್ದಾರೂಢಾ ಅವರು ಜೈಲಿನ ದಿನಗಳ ಬಗ್ಗೆ ಕೆಲವು ಮಾಹಿತಿ ತೆರೆದಿಟ್ಟಿದ್ದಾರೆ. ದರ್ಶನ್​ ಅವರನ್ನು ಭೇಟಿ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಈಗ ತುರುವನೂರು ಸಿದ್ದಾರೂಢ ಬಿಡುಗಡೆ ಆಗಿ ಬಂದಿದ್ದಾರೆ.

ಪ್ರಸಿದ್ಧ ನಟ ದರ್ಶನ್​ ಅವರು ರೇಣುಕಾಸ್ವಾಮಿಯ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರನ್ನು ಇನ್ನೋರ್ವ ಖೈದಿ ಭೇಟಿ ಮಾಡಿದ್ದಾರೆ. ಹೌದು, ಕೊಲೆ ಕೇಸ್​ನಲ್ಲಿ 11 ವರ್ಷ ಜೈಲು ವಾಸ ಅನುಭವಿಸಿ ಬಂದಿರುವ ತುರುವನೂರು ಸಿದ್ದಾರೂಢ ಅವರು ಜೈಲಿನಲ್ಲಿ ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಆ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಅವರು ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ. ‘ಕರಿಯ’ ಸಿನಿಮಾದ ಶೂಟಿಂಗ್​ ನೋಡಿದ್ದ ಅವರು ಆ ಬಳಿಕ ಜೈಲಿಗೆ ಹೋಗಿದ್ದರು. ಜೈಲು ಶಿಕ್ಷೆ ಮುಗಿಸಿ ಹೊರಗೆ ಬರುವುದಕ್ಕೂ ಮುನ್ನ ಜೈಲಿನಲ್ಲಿ ದರ್ಶನ್​ ಅವರನ್ನು ನೋಡಿದ್ದರ ಕುರಿತು ಅನುಭವವನ್ನು ತುರುವನೂರು ಸಿದ್ದಾರೂಢ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More