ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ದುರ್ಗಾ ದೇವಿಗೆ ಮಹಾ ಮಂಗಳಾರತಿ, ಟಿವಿ9 ನೆಟ್​ವರ್ಕ್ ಎಂಡಿ ಬರುಣ್ ದಾಸ್ ಭಾಗಿ

Updated on: Oct 16, 2026 | 10:42 PM

'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2026' ಕಾರ್ಯಕ್ರಮವು ಇಂದು (ಅಕ್ಟೋಬರ್ 16) ನವದೆಹಲಿಯಲ್ಲಿ ಸಾಂಪ್ರದಾಯಿಕ 'ಮಾ ದುರ್ಗಾ ಬೋಧನ್' ಪೂಜೆಯೊಂದಿಗೆ ಅದ್ಧೂರಿಯಾಗಿ ಆರಂಭಗೊಂಡಿದೆ. ಇಂಡಿಯಾ ಗೇಟ್ ಬಳಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ದುರ್ಗಾ ಪೂಜೆಯ 5 ದಿನಗಳ ಸಂಭ್ರಮಕ್ಕೆ ಈ ಧಾರ್ಮಿಕ ವಿಧಿ-ವಿಧಾನ ಅಧಿಕೃತ ಚಾಲನೆ ನೀಡಿದೆ. ಅಕ್ಟೋಬರ್ 20ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಮತ್ತು ದೇಶದ ವಿವಿಧ ಭಾಗಗಳ ಖಾದ್ಯಗಳ ವೈವಿಧ್ಯತೆ ಇರಲಿದೆ.

ನವದೆಹಲಿ, ಅಕ್ಟೋಬರ್ 16: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿರುವ 4ನೇ ಆವೃತ್ತಿಯ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2026‘ ಕಾರ್ಯಕ್ರಮವು ಇಂದು (ಅಕ್ಟೋಬರ್ 16) ನವದೆಹಲಿಯಲ್ಲಿ ಸಾಂಪ್ರದಾಯಿಕ ‘ಮಾ ದುರ್ಗಾ ಬೋಧನ್’ ಪೂಜೆಯೊಂದಿಗೆ ಅದ್ಧೂರಿಯಾಗಿ ಆರಂಭಗೊಂಡಿದೆ. ಇಂಡಿಯಾ ಗೇಟ್ ಬಳಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ದುರ್ಗಾ ಪೂಜೆಯ 5 ದಿನಗಳ ಸಂಭ್ರಮಕ್ಕೆ ಈ ಧಾರ್ಮಿಕ ವಿಧಿ-ವಿಧಾನ ಅಧಿಕೃತ ಚಾಲನೆ ನೀಡಿದೆ. ಅಕ್ಟೋಬರ್ 20ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಮತ್ತು ದೇಶದ ವಿವಿಧ ಭಾಗಗಳ ಖಾದ್ಯಗಳ ವೈವಿಧ್ಯತೆ ಇರಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಭಕ್ತರು ಸಾಂಪ್ರದಾಯಿಕ ಪ್ರಾರ್ಥನೆಗಳು, ಮಂತ್ರೋಚ್ಛಾರಣೆಗಳು ಮತ್ತು ಧಾರ್ಮಿಕ ಆಚರಣೆಗಳ ಮೂಲಕ ದೇವಿಯನ್ನು ಸ್ವಾಗತಿಸಿದರು. ದುರ್ಗಾ ಪೂಜೆಯ ಪ್ರಮುಖ ಆಕರ್ಷಣೆಯಾದ ಡೋಲಿನ ವಾದ್ಯ ಇಡೀ ವಾತಾವರಣವನ್ನು ಭಕ್ತಿಭರಿತವಾಗಿಸಿತು.

ಈ ಮಹತ್ವದ ಉತ್ಸವದ ಕುರಿತು ಮಾತನಾಡಿದ ಟಿವಿ9 ನೆಟ್‌ವರ್ಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಬರುಣ್ ದಾಸ್, ದೇಶದ ವಿವಿಧ ಮೂಲೆಗಳ ಸಂಪ್ರದಾಯಗಳು ಮತ್ತು ಸಮುದಾಯಗಳನ್ನು ಒಂದೆಡೆ ಸೇರಿಸುವ ಈ ಸಮಾರಂಭವು ‘ಭಾರತದ ನಿಜವಾದ ಉತ್ಸವ’ ಎಂದು ಬಣ್ಣಿಸಿದರು.

ಬೆಂಗಾಲಿಗಳ ದುರ್ಗಾ ಪೂಜಾ ಸಂಪ್ರದಾಯದಲ್ಲಿ ‘ಮಾ ದುರ್ಗಾ ಬೋಧನ್’ ಅತ್ಯಂತ ಪ್ರಮುಖ ಧಾರ್ಮಿಕ ವಿಧಿಯಾಗಿದೆ. ಈ ಆಚರಣೆಯು ದೇವಿಯ ಆವಾಹನೆ ಮತ್ತು ಪೂಜಾ ಪೆಂಡಲ್‌ಗೆ ದೇವಿಯನ್ನು ಸ್ವಾಗತಿಸುವ ಸಂಕೇತವಾಗಿದೆ. ಭಕ್ತರು ವಿಶೇಷ ಪೂಜೆ ಸಲ್ಲಿಸಿ ಮಂತ್ರಗಳನ್ನು ಪಠಿಸುವ ಮೂಲಕ ದುರ್ಗಾ ದೇವಿಯ ಪೂಜೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More