‘ಟಿವಿ9’ ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆಯ ಬಾಣಂತಿಯರ ವಾರ್ಡ್‌ಗೆ ಹೊಸ ಯುಪಿಎಸ್ ಅಳವಡಿಕೆ
ಟಿವಿ9 ವರದಿಯ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸ ಯುಪಿಎಸ್ ಅಳವಡಿಸಲಾಗಿದೆ. ವಿದ್ಯುತ್ ಇಲ್ಲದೆ ನವಜಾತ ಶಿಶುಗಳು ಮತ್ತು ಬಾಣಂತಿಯರು ಪಡುತ್ತಿದ್ದ ಕಷ್ಟಗಳನ್ನು ಟಿವಿ9 ವಿಸ್ತೃತವಾಗಿ ವರದಿ ಮಾಡಿತ್ತು. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಬಾಣಂತಿಯರ ವಾರ್ಡ್‌ಗೆ ಯುಪಿಎಸ್ ಅಳವಡಿಕೆಯಿಂದ ವಿದ್ಯುತ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
ಬಳ್ಳಾರಿ, ಅಕ್ಟೋಬರ್ 12: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುಗಳು ಮತ್ತು ಬಾಣಂತಿಯರು ವಿದ್ಯುತ್ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಗಾಳಿ ಮತ್ತು ಬೆಳಕಿನ ಕೊರತೆಯಿಂದಾಗಿ ಬಾಣಂತಿಯರ ವಾರ್ಡ್‌ನಲ್ಲಿ ರೋಗಿಗಳು ಪರದಾಡುತ್ತಿದ್ದರು. ಆಸ್ಪತ್ರೆಯ ಈ ಅವ್ಯವಸ್ಥೆ ಮತ್ತು ರೋಗಿಗಳ ಸಂಕಷ್ಟಗಳ ಕುರಿತು ‘ಟಿವಿ9’ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯು ಪ್ರಸಾರವಾದ ಬೆನ್ನಲ್ಲೇ ಆರೋಗ್ಯ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ವರದಿಯ ಪ್ರಭಾವದಿಂದ ಅಧಿಕಾರಿಗಳು ಅಲರ್ಟ್ ಆಗಿದ್ದು, ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿಯರ ವಾರ್ಡ್‌ಗೆ ಪ್ರತ್ಯೇಕ ಹೊಸ ಯುಪಿಎಸ್ (ಅನ್‌ಇಂಟರಪ್ಟಿಬಲ್ ಪವರ್ ಸಪ್ಲೈ) ಅನ್ನು ಅಳವಡಿಸಲಾಗಿದೆ.
ಈ ಹೊಸ ಯುಪಿಎಸ್ ಅಳವಡಿಕೆಯಿಂದಾಗಿ, ವಿದ್ಯುತ್ ಸಮಸ್ಯೆಯಿಂದಾಗಿ ಬಾಣಂತಿಯರು ಮತ್ತು ನವಜಾತ ಶಿಶುಗಳು ಎದುರಿಸುತ್ತಿದ್ದ ಎಲ್ಲಾ ಸಂಕಷ್ಟಗಳಿಗೆ ಇದೀಗ ಮುಕ್ತಿ ಸಿಕ್ಕಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
