ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್
JDS ಮುಖಂಡೆ ಪುತ್ರನ ಕಿರುಕಳಕ್ಕೆ ಕಾರವಾರದಲ್ಲಿ ಯುವತಿ ಆತ್ಮಹತ್ಯೆ ಕೇಸ್ಗೆ ಹೊಸ ತಿರುವು ಸಿಕ್ಕಿದೆ. ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಅದನ್ನು ಹೇಳಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಕೇಸ್ ದಾಖಲಾಗಿ 4 ದಿನ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸದ ಕಾರಣ, ಮೃತ ಯುವತಿಯ ತಾಯಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಕಾರವಾರ, ಜನವರಿ 14: ಜೆಡಿಎಸ್ ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಕಿರುಕುಳವನ್ನೂ ಆರೋಪಿ ನೀಡಿದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಿಶಾಲ ಡಿಸೋಜಾ ತಾಯಿ ಕ್ರಿಸ್ತೋದ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ನಾವು ಮೃತದೇಹಕ್ಕೆ ಸ್ನಾನ ಮಾಡಿಸುತ್ತೇವೆ. ಈ ವೇಳೆ ಮಗಳ ಖಾಸಗಿ ಭಾಗ ಸೇರಿದಂತೆ ದೇಹದ ಬಹುತೇಕ ಕಡೆ ಕಚ್ಚಿದ ಮಾರ್ಕ್ ಕಂಡುಬಂದಿದೆ. ಖಾಸಗಿ ಭಾಗದಿಂದ ತಿವ್ರವಾದ ರಕ್ತಸ್ರಾವ ಕೂಡ ಆಗಿದೆ. ಅತ್ಯಾಚಾರದ ವಿಚಾರ ಮನೆಯಲ್ಲಿ ಹೇಳೋಕೆ ಆಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅವರು ಹೇಳಿದ್ದಾರೆ. ನ್ಯಾಯಕ್ಕೆ ಆಗ್ರಹಿಸಿ ಸಿಎಂ, ಗೃಹ ಸಚಿವ ಹಾಗೂ ಎಸ್ಪಿ ಮತ್ತು ಡಿಸಿಗೆ ಕ್ರಿಸ್ತೋದ ಡಿಸೋಜಾ ಪತ್ರ ಕೂಡ ಬರೆದಿದ್ದು, ಆರೋಪಿ ಬಂಧಿಸದಿದ್ರೆ ಕಾರವಾರ ಡಿಸಿ ಕಚೇರಿ ಮುಂದೆ ಧರಣಿಗೆ ಕದ್ರಾ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕಿರುಕಳಕ್ಕೆ ರಿಶಾಲ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಈ ಹಿಂದೆ ಕೇಳಿಬಂದಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
