ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ

ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ

ಸೂರಜ್ ಪ್ರಸಾದ್ ಎಸ್.ಎನ್
| Updated By: ಸುಷ್ಮಾ ಚಕ್ರೆ

Updated on: Nov 30, 2024 | 3:48 PM

ಸಚಿವರು ಹಾಗೂ ಅಧಿಕಾರಿಗಳ ಎದುರೇ ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಮಲ್ಲಯುದ್ಧ ನಡೆದಿದೆ. ಚಾಮರಾಜನಗರ ಜಿಲ್ಲೆಯ ಇಬ್ಬರು ಪ್ರಬಲ ಸಚಿವ ಆಕಾಂಕ್ಷಿಗಳ ನಡುವೆ ವಾಗ್ದಾಳಿ ನಡೆದಿದೆ. ಕೆಡಿಪಿ ಸಭೆಯಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಶಾಸಕ ಎ.ಆರ್ ಕೃಷ್ಣಮೂರ್ತಿ ನಡುವೆ ಮಾತಿನ ಸಮರ ನಡೆದಿದೆ.

ಚಾಮರಾಜನಗರ: ಚಾಮರಾಜನಗರದಲ್ಲಿ ಸಚಿವರಾದ ಕೆ. ವೆಂಕಟೇಶ್ ಮತ್ತು ಎಚ್.ಸಿ. ಮಹದೇವಪ್ಪ ಭಾಗವಹಿಸಿದ್ದ ಕೆಡಿಪಿ ಸಭೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾದ ಕಾಂಗ್ರೆಸ್ ಸಚಿವರಾದ ಪುಟ್ಟರಂಗಶೆಟ್ಟಿ ಹಾಗೂ ಶಾಸಕ ಎ.ಆರ್ ಕೃಷ್ಣಮೂರ್ತಿ ನಡುವೆ ಮಾತಿನ ಸಮರ ನಡೆದಿದೆ. ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿ ಮತ್ತು ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ ನಡುವಿನ ಅಸಮಾಧಾನ ಸ್ಫೋಟವಾಗಿದೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಇಬ್ಬರು ಶಾಸಕರು ಮಾತಿನ ಸಮರ ನಡೆಸಿದ್ದಾರೆ. ಕೆರೆ ನೀರು ತುಂಬಿಸುವ ಯೋಜನೆ ಬಗ್ಗೆ ಮಾತನಾಡುತ್ತಿದ್ದ ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಅವರ ವಿರುದ್ಧ ಶಾಸಕ ಪುಟ್ಟರಂಗಶೆಟ್ಟಿ ಗರಂ ಆಗಿದ್ದಾರೆ. ನಾನು ಮಾತನಾಡುವುದು ತಪ್ಪು ಎನ್ನುವುದಾದರೆ ಕೆಡಿಪಿ ಮೀಟಿಂಗ್ ಯಾಕೆ ಮಾಡ್ತೀರಾ? ಇಲ್ಲಿಗೆ ನಾವೇಕೆ ಬರಬೇಕು? ಎಂದು ಕಾಂಗ್ರೆಸ್ ಶಾಸಕ ಎ‌.ಆರ್ ಕೃಷ್ಣಮೂರ್ತಿ ಕೂಡ ಕೂಗಾಡಿದ್ದಾರೆ. ಈ ಇಬ್ಬರು ಕೈ ಶಾಸಕರ ನಡುವಿನ ಮಾತಿನ ಜಟಾಪಟಿ ನೋಡಿ ಸಚಿವ ಕೆ. ವೆಂಕಟೇಶ್ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ