ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಂಡಿರುವವರು ಎರಡು ತಿಂಗಳಲ್ಲಿ ಸರ್ಕಾರಕ್ಕೆ ಸರೆಂಡರ್ ಮಾಡಬೇಕು: ಈಶ್ವರ್ ಖಂಡ್ರೆ, ಆರಣ್ಯ ಸಚಿವ

|

Updated on: Oct 28, 2023 | 5:41 PM

ವರ್ತೂರು ಸಂತೋಷ್ ಪ್ರಕರಣ ಜರುಗುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಇರಲಿಲ್ಲ ಎಂದರು. ಪ್ರಕರಣದ ಬಳಿಕ ಎಲ್ಲರಿಗೂ ಗೊತ್ತಾಗಿರುವುದರಿಂದ ಅವುಗಳನ್ನು ಹೊಂದಿರುವವವರು ಸರ್ಕಾರಕ್ಕೆ ಸರೆಂಡರ್ ಮಾಡಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ ಮತ್ತು ಗಡುವು ತೀರಿದ ಬಳಿಕ ಸರ್ಕಾರ ಒಂದು ಸುತ್ತೋಲೆಯನ್ನು ಹೊಡಿಸಲಿದೆ ಎಂದು ಖಂಡ್ರೆ ಹೇಳಿದರು.

ಬೀದರ್: ಹುಲಿ ಉಗುರು ಮತ್ತು ಇತರ ವನ್ಯಜೀವಿ ಉತ್ಪನ್ನಗಳನ್ನು (wildlife products) ಮನೆಯಲ್ಲಿಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಲು ಅರಣ್ಯ ಇಲಾಖೆ ಎರಡು ತಿಂಗಳು ಗಡುವು ನೀಡಿದೆ. ಬೀದರ್ ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre), 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ (Wildlife Protection Act 1972) ಬಂದ ಬಳಿಕ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟಿಕೊಂಡಿರುವ ಜನರಿಗೆ ಅವುಗಳ ಬಗ್ಗೆ ಘೋಷಣೆ ಮಾಡಿ ಇಟ್ಟುಕೊಳ್ಳಲು ಅನುಮತಿ ನೀಡಲಾಗಿತ್ತು. ಅದರೆ, ಕಾಯ್ದೆಯಲ್ಲಿ 2003 ಮತ್ತು 2022 ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. 2022 ತಿದ್ದುಪಡಿ ಅನ್ವಯ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಳ್ಳುವುದು, ಧರಿಸುವುದು, ಬಳಸುವುದು, ಸಂಗ್ರಹ-ಸಾಗಾಣಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಹೇಳಿದ ಸಚಿವ, ವರ್ತೂರು ಸಂತೋಷ್ ಪ್ರಕರಣ ಜರುಗುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಇರಲಿಲ್ಲ ಎಂದರು. ಪ್ರಕರಣದ ಬಳಿಕ ಎಲ್ಲರಿಗೂ ಗೊತ್ತಾಗಿರುವುದರಿಂದ ಅವುಗಳನ್ನು ಹೊಂದಿರುವವವರು ಸರ್ಕಾರಕ್ಕೆ ಸರೆಂಡರ್ ಮಾಡಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ ಮತ್ತು ಗಡುವು ತೀರಿದ ಬಳಿಕ ಸರ್ಕಾರ ಒಂದು ಸುತ್ತೋಲೆಯನ್ನು ಹೊಡಿಸಲಿದೆ ಎಂದು  ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ