ವಿಚಾರಣೆ ವೇಳೆ ಸಾಕ್ಷ್ಯ ಲಭ್ಯವಾಗಿರುವುದರಿಂದ ಇಬ್ಬರನ್ನು ದಸ್ತಗಿರಿ ಮಾಡಲಾಗಿದೆ: ಅಲೋಕ್ ಕುಮಾರ್, ಎಡಿಜಿಪಿ

ವಿಚಾರಣೆ ವೇಳೆ ಸಾಕ್ಷ್ಯ ಲಭ್ಯವಾಗಿರುವುದರಿಂದ ಇಬ್ಬರನ್ನು ದಸ್ತಗಿರಿ ಮಾಡಲಾಗಿದೆ: ಅಲೋಕ್ ಕುಮಾರ್, ಎಡಿಜಿಪಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 2:32 PM

ಜಾಕಿರ್ ಮತ್ತು ಶಫೀಕ್ ಹೆಸರಿನ ಇಬ್ಬರು ಶಂಕಿತರನ್ನು ಬುಧವಾರ ಸಾಯಂಕಾಲ ವಶಕ್ಕೆ ಪಡೆದ ಬಳಿಕ ವಿಚಾರಣೆ ಸಮಯದಲ್ಲಿ ಕೆಲ ಸಾಕ್ಷ್ಯಗಳು ಲಭ್ಯವಾಗಿರುವುದರಿಂದ ಅವರನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ದಸ್ತಗಿರಿ (arrest) ಮಾಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar ADGP) ಅವರು ಮಂಗಳೂರಲ್ಲಿ ಬುಧವಾರ ಟಿವಿ9 ಕನ್ನಡ ವಾಹಿನಿಗೆ ತಿಳಿಸಿದರು. ಜಾಕಿರ್ ಮತ್ತು ಶಫೀಕ್ ಹೆಸರಿನ ಇಬ್ಬರು ಶಂಕಿತರನ್ನು ಬುಧವಾರ ಸಾಯಂಕಾಲ ವಶಕ್ಕೆ ಪಡೆದ ಬಳಿಕ ವಿಚಾರಣೆ ಸಮಯದಲ್ಲಿ ಕೆಲ ಸಾಕ್ಷ್ಯಗಳು ಲಭ್ಯವಾಗಿರುವುದರಿಂದ ಅವರನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.