ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್

Updated on: May 12, 2026 | 8:27 PM

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನೋಡುತ್ತಿದ್ದಾಗಲೇ ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ವಿವಾದಾತ್ಮಕವಾದ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಇಂದು ಸದನದಲ್ಲಿ ಮತ್ತೆ 'ಸನಾತನ ಧರ್ಮದ ನಿರ್ಮೂಲನೆ'ಯನ್ನು ಪ್ರತಿಪಾದಿಸಿದ್ದಾರೆ. ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮೌನವಾಗಿದ್ದರು.

ಚೆನ್ನೈ, ಮೇ 12: ತಮಿಳುನಾಡಿನಲ್ಲಿ ಮತ್ತೊಮ್ಮೆ ಸನಾತನ ಧರ್ಮದ ಸುತ್ತಲಿನ ವಿವಾದ ಸೃಷ್ಟಿಯಾಗಿದೆ. ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಇಂದು ಸದನದಲ್ಲಿ ಮತ್ತೆ ‘ಸನಾತನ ಧರ್ಮದ ನಿರ್ಮೂಲನೆ’ಯನ್ನು ಪ್ರತಿಪಾದಿಸಿದ್ದಾರೆ. ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Joseph Vijay) ಮೌನವಾಗಿದ್ದರು.

“ಜನರನ್ನು ಬೇರ್ಪಡಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಸ್ಟಾಲಿನ್ ತಮಿಳುನಾಡು ಚುನಾವಣೆಯ ನಂತರ ವಿಧಾನಸಭಾ ಅಧಿವೇಶನದ ಮೊದಲ ದಿನದಂದು ಹೇಳಿದ್ದಾರೆ. ಅವರ ಈ ಹೇಳಿಕೆಗಳು ಸನಾತನ ಧರ್ಮದ ಬಗ್ಗೆ ಅವರ ಹಿಂದಿನ ಹೇಳಿಕೆಗಳನ್ನು ಪ್ರತಿಬಿಂಬಿಸುತ್ತವೆ. ಅದರಲ್ಲಿ ಅವರು ಪ್ರಾಚೀನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳ ಜೊತೆ ಹೋಲಿಸಿದ್ದರು. ಅಂತಹ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಜನರನ್ನು ಒತ್ತಾಯಿಸಿದ್ದರು. ಈ ಹೇಳಿಕೆಗಳ ಬಳಿಕ ಸ್ಟಾಲಿನ್‌ಗೆ ದೊಡ್ಡ ಕಾನೂನು ತೊಂದರೆ ಎದುರಾಗಿತ್ತು. ಅವರ ವಿರುದ್ಧ ಹಲವಾರು ನ್ಯಾಯಾಲಯ ಪ್ರಕರಣಗಳು ದಾಖಲಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More