Video: ಉಕ್ರೇನ್​ನಲ್ಲಿ ಹತ್ಯೆಯಾದ ವಿದ್ಯಾರ್ಥಿ ನವೀನ್ ಕನ್ನಡ ಪ್ರೇಮದ ವಿಡಿಯೋ ವೈರಲ್

ಉಕ್ರೇನ್‌ನಲ್ಲಿ ಕನ್ನಡದ ಶಾಲು ಹಾಕಿಕೊಂಡಿದ್ದ ನವೀನ್, ಸ್ನೇಹಿತರ ಜತೆ ಕನ್ನಡ ಶಾಲು ಹಾಕಿಕೊಂಡು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

TV9kannada Web Team

| Edited By: ganapathi bhat

Mar 02, 2022 | 1:10 PM

ರಷ್ಯಾ ದಾಳಿಗೆ ಉಕ್ರೇನ್‌ನಲ್ಲಿ ಕನ್ನಡಿಗ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾರೆ. ಈ ಮಧ್ಯೆ, ನವೀನ್ ಕನ್ನಡ ಪ್ರೇಮದ ವಿಡಿಯೋಗಳು ವೈರಲ್ ಆಗಿವೆ. ಉಕ್ರೇನ್‌ನಲ್ಲಿ ಕನ್ನಡದ ಶಾಲು ಹಾಕಿಕೊಂಡಿದ್ದ ನವೀನ್, ಸ್ನೇಹಿತರ ಜತೆ ಕನ್ನಡ ಶಾಲು ಹಾಕಿಕೊಂಡು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಕ್ರೇನ್ (Ukrain) ಮತ್ತು ರಷ್ಯಾ (Russia) ನಡುವೆ ಯುದ್ಧ ಮುಂದುವರಿದಿದೆ. ಭೀಕರ ಸಮರದಲ್ಲಿ ರಾಜ್ಯದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ನಿನ್ನೆ ಸಾವನ್ನಪ್ಪಿದ್ದಾರೆ. ಮೃತ ನವೀನ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದವರು. ರಷ್ಯಾ ದಾಳಿಗೆ ನವೀನ್ ಅಸುನೀಗಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ರಾಜ್ಯ ಹಾಗೂ ದೇಶದ ಜನರು ಕೂಡ ವಿದ್ಯಾರ್ಥಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

ನವೀನ್ ಸಹಪಾಠಿಗಳು ಹಾಗೂ ನವೀನ್ ಕಲಿತ ಕಾಲೇಜು ಆತನಿಗೆ ಶ್ರದ್ಧಾಂಜಲಿ ಕೋರಿವೆ. ನವೀನ್ ನೆನಪುಗಳನ್ನು ಎಲ್ಲರೂ ಮೆಲುಕು ಹಾಕಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಕನ್ನಡದ ಶಾಲು ಹಾಕಿ ಸಂಭ್ರಮದಲ್ಲಿ ಇರುವುದು ಕಂಡುಬಂದಿದೆ.

ಇದನ್ನೂ ಓದಿ: ನವೀನ್ ಕುಟುಂಬಕ್ಕೆ ಪರಿಹಾರವನ್ನು ನೀಡುತ್ತೇವೆ, ಯುದ್ಧದಿಂದ ಮೃತದೇಹ ತರಲು ಕಷ್ಠ; ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ; ಮೃತ ನವೀನ್ ನೆನೆದು ತಂದೆ ಕಣ್ಣೀರು

Follow us on

Click on your DTH Provider to Add TV9 Kannada