ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್ನ ಡ್ರೋನ್ ದಾಳಿ; ಭಾರಿ ಅಗ್ನಿ ಅವಘಡ, ಎಲ್ಲೆಲ್ಲೂ ಕಪ್ಪು ಹೊಗೆ
ಉಕ್ರೇನ್ ಗಡಿಗೆ ಹತ್ತಿರವಿರುವ ರಷ್ಯಾದ ತೈಲ ಸಂಸ್ಕರಣಾಗಾರದ ಇಂಧನ ಶೇಖರಣಾ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಸಂಸ್ಕರಣಾಗಾರದ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ದಾಳಿಯ ಭೀಕರತೆಗೆ ತೈಲ ಟ್ಯಾಂಕರ್‌ಗಳು ಹೊತ್ತಿ ಉರಿದಿದ್ದು, ಕಿಲೋಮೀಟರ್‌ಗಳಷ್ಟು ದೂರದವರೆಗೂ ಬೃಹತ್ ಪ್ರಮಾಣದಲ್ಲಿ ಕಪ್ಪು ಹೊಗೆ ಹರಡಿದೆ. ಸ್ಥಳೀಯ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದು, ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಲಾಗಿದೆ.
ಮಾಸ್ಕೋ, ಅಕ್ಟೋಬರ್ 30: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಷ್ಯಾದ ಪ್ರಮುಖ ತೈಲ ಸಂಸ್ಕರಣಾಗಾರ ಒಂದರ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಬೆನ್ನಲ್ಲೇ ತೈಲ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಆಕಾಶದ ತುಂಬ ಕಪ್ಪು ಬಣ್ಣದ ದಟ್ಟ ಹೊಗೆ ಆವರಿಸಿರುವ ಭೀಕರ ದೃಶ್ಯಗಳು ವೈರಲ್ ಆಗಿವೆ. ರಷ್ಯಾದ ಯುದ್ಧ ಯಂತ್ರಕ್ಕೆ ಇಂಧನ ಪೂರೈಸುವ ಪ್ರಮುಖ ಮೂಲಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಪಡೆಗಳು ಈ ದಾಳಿ ನಡೆಸಿವೆ.
ಉಕ್ರೇನ್ ಗಡಿಗೆ ಹತ್ತಿರವಿರುವ ರಷ್ಯಾದ ತೈಲ ಸಂಸ್ಕರಣಾಗಾರದ ಇಂಧನ ಶೇಖರಣಾ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಸಂಸ್ಕರಣಾಗಾರದ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ದಾಳಿಯ ಭೀಕರತೆಗೆ ತೈಲ ಟ್ಯಾಂಕರ್‌ಗಳು ಹೊತ್ತಿ ಉರಿದಿದ್ದು, ಕಿಲೋಮೀಟರ್‌ಗಳಷ್ಟು ದೂರದವರೆಗೂ ಬೃಹತ್ ಪ್ರಮಾಣದಲ್ಲಿ ಕಪ್ಪು ಹೊಗೆ ಹರಡಿದೆ. ಸ್ಥಳೀಯ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದು, ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ