ಸುರಕ್ಷಿತರಾಗಿದ್ದೇವೆ ಎಂಬ ಭಾವನೆಯೇ ಮೂಡುತ್ತಿಲ್ಲ, ಎನ್ನುತ್ತಾರೆ ಸುರಂಗ ಮಾರ್ಗಗಳಲ್ಲಿ ಆಶ್ರಯ ಪಡೆದಿರುವ ಉಕ್ರೇನ್ ಜನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 25, 2022 | 5:10 PM

ಉಕ್ರೇನ್ ಗಡಿಭಾಗದಲ್ಲಿ ವಾಸವಾಗಿರುವ ಕುಟುಂಬಗಳ ಪಡಿಪಾಟಲು ಈ ವಿಡಿಯೋನಲ್ಲಿ ದುಃಖಿಸುತ್ತಾ ಮಾತಾಡುತ್ತಿರುವ ಮಹಿಳೆಯ ಮಾತು ಕೇಳಿಸಿಕೊಂಡರೆ ಅರ್ಥವಾಗುತ್ತದೆ. ಆಕೆ ಗದ್ಗಳಿತಳಾಗಿ ಮಾತಾಡುತ್ತಿದ್ದಾಳೆ.

ಎರಡು ರಾಷ್ಟ್ರಗಳ ನಡುವೆ ಯುದ್ಧ ಆರಂಭವಾದಾಗ ಆಫ್ಕೋರ್ಸ್ ಎರಡೂ ಕಡೆಯ ಸೈನಿಕರು (soldiers) ಹತರಾಗುತ್ತಾರೆ, ಅವರ ಕುಟುಂಬಗಳು ಅನಾಥಗೊಳ್ಳುತ್ತವೆ. ಅದು ಸರಿ, ಸೈನಿಕರ ಕುಟುಂಬಗಳ ಹಾಗೆ ಯುದ್ಧ ನಡೆಯುವ ಸ್ಥಳದ ಹತ್ತಿರದಲ್ಲಿ ವಾಸಿಸುವ ಜನಸಾಮಾನ್ಯರ ಕುಟುಂಬಗಳು ಸಹ ಹೆಚ್ಚಿನ ಆತಂಕದಲ್ಲಿರುತ್ತವೆ. ಉಕ್ರೇನ್ (Ukraine) ಮತ್ತು ರಷ್ಯಾದ (Russia) ನಡುವೆ ಯುದ್ಧ ಆರಂಭವಾಗಿದೆ. ಇವತ್ತು ಯುದ್ಧದ ಎರಡನೇ ದಿನ. ಉಕ್ರೇನ್ ಗಡಿಭಾಗದಲ್ಲಿ ವಾಸವಾಗಿರುವ ಕುಟುಂಬಗಳ ಪಡಿಪಾಟಲು ಈ ವಿಡಿಯೋನಲ್ಲಿ ದುಃಖಿಸುತ್ತಾ ಮಾತಾಡುತ್ತಿರುವ ಮಹಿಳೆಯ ಮಾತು ಕೇಳಿಸಿಕೊಂಡರೆ ಅರ್ಥವಾಗುತ್ತದೆ. ಆಕೆ ಗದ್ಗಳಿತಳಾಗಿ ಮಾತಾಡುತ್ತಿದ್ದಾಳೆ. ನಾಗರಿಕ ಸೇವೆ ಮತ್ತು ಮಿಲಿಟರಿ ಅಧಿಕಾರಿಗಳು ಅವರನ್ನು ಸುರಕ್ಷಿತವಾಗಿರುವ ಮಿಲಿಟರಿ ನೆಲೆಗಳಿಗೆ ಕರೆದೊಯ್ಯದೆ ಅವರ ಮನೆಗಳ ಪಕ್ಕದಲ್ಲೇ ಇರುವ ಸುರಂಗ ಮಾರ್ಗಗಳಿಗೆ ಕರೆದುಕೊಂಡು ಹೋಗುತ್ತಿದ್ದಾರಂತೆ.

‘ಸುರಕ್ಷಿತವಾಗಿದ್ದೇವೆ ಎಂಬ ಭಾವನೆಯೇ ನಮ್ಮಲ್ಲಿ ಮೂಡುತ್ತಿಲ್ಲ,’ ಎಂದು ಆಕೆ ದುಃಖಿಸುತ್ತಾ ಹೇಳುತ್ತಿದ್ದಾಳೆ. ಬೆಳಗ್ಗೆ ಬಾಂಬ್ ಸ್ಫೋಟಗಳ ಸದ್ದಿನಲ್ಲಿ ಎದ್ದಾಗ ನಿಮ್ಮ ಮನಸ್ಸಿನಲ್ಲಿ ಉಂಟಾದ ಭಾವನೆ ಎಂಥದ್ದು ಎಂದು ಪ್ರಾಯಶಃ ಒಬ್ಬ ಪತ್ರಕರ್ತೆ ಆಕೆಗೆ ಕೇಳುತ್ತಾರೆ.

‘ಇದೆಲ್ಲ ಸುಳ್ಳಾಗಿರಲಿ ಅಂತ ಅಂದುಕೊಂಡೆ. ನಮಗೆ ಪ್ರಾಣ ಕಳೆದುಕೊಳ್ಳುವುದು ಬೇಕಿಲ್ಲ. ನಾವು ಜೀವಿಸಬೇಕಿದೆ. ಯುಎಸ್ ಮತ್ತು ಯುರೋಪ್ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಯಾಕೆಂದರೆ ಪುಟಿನ್ ಯುದ್ಧ ನಿಲ್ಲಿಸುವುದಿಲ್ಲ ಅಂತ ನಮಗೆ ಗೊತ್ತಿದೆ. ಯುದ್ಧ ಮುಂದುವರಿದರೆ ನಾವು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅಂಥ ಸ್ಥಿತಿಯನ್ನು ನಾವು ಯೋಚಿಸುವುದು ಸಾಧ್ಯವಿಲ್ಲ,’ ಎಂದು ಆಕೆ ಹೇಳುತ್ತಾಳೆ.

ವಿಶೇಷ ಮಾಹಿತಿ: 

ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ಪೋರ್ಟಲ್ ಸ್ಥಾಪಿಸಿದೆ. ಉಕ್ರೇನ್ನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್​ಸೈಟ್​ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್​​​ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.

ವೆಬ್​ಪೋರ್ಟಲ್ ಲಿಂಕ್: http://Ukraine.Karnataka.tech

ಇದನ್ನೂ ಓದಿ:  ‘ಏನು ಮಾಡುತ್ತೀರೋ ಮಾಡಿಕೊಳ್ಳಿ’; ಸಾಯುವ ಮುನ್ನ ಧೈರ್ಯದಿಂದ ರಷ್ಯಾ ಪಡೆಯನ್ನು ಎದುರಿಸಿದ ಉಕ್ರೇನ್ ಸೈನಿಕರು