ಇದು ಪ್ರಜಾಪ್ರಭುತ್ವನಾ, ಪೋಲಿಸ್ ರಾಜ್ಯನಾ ಇಲ್ಲ ಸರ್ವಾಧಿಕಾರನಾ? ಸಿದ್ದರಾಮಯ್ಯ
ನಮ್ಮ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸಹ ನಮ್ಮನ್ನು ಬಿಡುತ್ತಿಲ್ಲ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ, ಎಂದು ಸಿದ್ದರಾಮಯ್ಯ ಹೇಳಿದರು.
Bengaluru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಬೆಂಗಳೂರಲ್ಲಿ ಮಂಗಳವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ದೇಶದಲ್ಲಿ ಈಗ ಆಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ, ದೆಹಲಿಯಲ್ಲಿ ನಮ್ಮ ನಾಯಕರು ಡಿಕೆ ಸುರೇಶ್, ಹೆಚ್ ಕೆ ಪಾಟೀಲ್ (HK Patil), ದಿನೇಶ್ ಗುಂಡೂರಾವ್ ಮೊದಲಾದವರೆಲ್ಲ ಎಐಸಿಸಿ (AICC) ಕಚೇರಿಗೆ ಹೋಗುವಾಗ ಅವರನ್ನು ಮ್ಯಾನ್ ಹ್ಯಾಂಡಲ್ ಮಾಡಿ ಬಂಧಿಸಲಾಗಿದೆ. ಇದೇನು ಪ್ರಜಾಪ್ರಭುತ್ವನಾ, ಪೊಲೀಸ್ ರಾಜ್ಯವಾ ಅಥವಾ ಸರ್ವಾಧಿಕಾರನಾ? ನಮ್ಮ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸಹ ನಮ್ಮನ್ನು ಬಿಡುತ್ತಿಲ್ಲ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ, ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.