ಗೃಹಜ್ಯೋತಿ ಯೋಜನೆ ಅಡಿ ಇನ್ನು ಮುಂದೆ ಶೇ.10 ರ ಬದಲು 10 ಯೂನಿಟ್ ಹೆಚ್ಚುವರಿಯಾಗಿ ಬಳಸಲು ಅವಕಾಶ!
ಒಂದು ಕುಟುಂಬ 20 ಯೂನಿಟ್ ಬಳಸುತ್ತಿದ್ದರೆ ಅವರಿಗೆ ಕೇವಲ 2 ಯೂನಿಟ್ ಮಾತ್ರ ಹೆಚ್ಚುವರಿಯಾಗಿ ಸಿಗುತಿತ್ತು. ಹಾಗಾಗಿ ಇನ್ನು ಮುಂದೆ, ಮಾಸಿಕ 48 ಯೂನಿಟ್ ಗಳಷ್ಟು ವಿದ್ಯುತ್ ಬಳಸುವ ಕುಟುಂಬಗಳು ಹೆಚ್ಚುವರಿಯಾಗಿ 10 ಯೂನಿಟ್ ಬಳಸಬಹುದು
ಬೆಂಗಳೂರು: ಗೃಹಜ್ಯೋತಿ ಗ್ಯಾರಂಟಿ (Gruha Jyoti) ಅಡಿ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್ ಉಚಿತ ಬಳಕೆ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ (Siddaramaiah government) ಒಂದು ಚಿಕ್ಕ ತಿದ್ದುಪಾಟು ಮಾಡಿದೆ. ಕ್ಯಾನಿನೆಟ್ ಮೀಟಿಂಗ್ ನಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಇಂಧನ ಸಚಿವ ಕೆಜೆ ಜಾರ್ಜ್ (KJ George), ಇದುವರೆಗೆ ಗ್ರಾಹಕರ ವಿದ್ಯುತ್ ಬಳಕೆಯ ಮೇಲೆ ಶೇಕಡ 10ರಷ್ಟು ಹೆಚ್ಚುವರಿ ಯೂನಿಟ್ ಗಳನ್ನು ಉಚಿತವಾಗಿ ಬಳಸುವ ಅವಕಾಶ ಸರ್ಕಾರ ನೀಡುತಿತ್ತು. ಅದರೆ ಅದರಿಂದ ಮಾಸಿಕ 48 ಯೂನಿಟ್ ಗಳಿಗಿಂತ ಕಡಿಮೆ ಬಳಸುತ್ತಿದ್ದವರಿಗೆ ಪ್ರಯೋಜನವಾಗುತ್ತಿರಲಿಲ್ಲ. ಒಂದು ಕುಟುಂಬ 20 ಯೂನಿಟ್ ಬಳಸುತ್ತಿದ್ದರೆ ಅವರಿಗೆ ಕೇವಲ 2 ಯೂನಿಟ್ ಮಾತ್ರ ಹೆಚ್ಚುವರಿಯಾಗಿ ಸಿಗುತಿತ್ತು. ಹಾಗಾಗಿ ಇನ್ನು ಮುಂದೆ, ಮಾಸಿಕ 48 ಯೂನಿಟ್ ಗಳಷ್ಟು ವಿದ್ಯುತ್ ಬಳಸುವ ಕುಟುಂಬಗಳು ಹೆಚ್ಚುವರಿಯಾಗಿ 10 ಯೂನಿಟ್ ಬಳಸಬಹುದು. ಅಂದರೆ 44 ಯೂನಿಟ್ ಬಳಸುವವರು 54 ಯೂನಿಟ್ ಬಳಸಬಹುದು. ಮೊದಲಿನ ನಿಯಮವಾಗಿದ್ದರೆ ಅವರಿಗೆ ಕೇವಲ 4 ಯೂನಿಟ್ ಹೆಚ್ಚುವರಿಯಾಗಿ ಲಭ್ಯವಾಗುತಿತ್ತು ಎಂದು ಹೇಳಿದ ಜಾರ್ಜ್ ಈ ಬದಲಾವಣೆಯಿಂದ ಸರ್ಕಾರದ ಮೇಲೆ ಸುಮಾರು 500 ಕೋಟಿ ರೂ. ಗಳಷ್ಟು ಹೊರೆಬೀಳಲಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ