ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಪ್ರಸಾದವಾಗಿ ನೀಡಲು ಉದ್ಯಮಿಯೊಬ್ಬರಿಂದ 10,000 ಜೊತೆ ಕಂಗನ್!
ನಮ್ಮ ಕಣ್ಣೆದುರೇ ರಾಮಮಂದಿರ ನಿರ್ಮಾಣಗೊಂಡಿರುವುದು ನಮಲ್ಲಿ ಸಂತಸಭರಿತ ರೋಮಾಂಚನ ಮೂಡಿಸಿದೆ ಮತ್ತು ಕೃತಾರ್ಥ ಭಾವ ತಳೆಯುವಂತೆ ಮಾಡಿದೆ, ಇದು ಸೌಭಾಗ್ಯವಲ್ಲದೆ ಮತ್ತೇನೂ ಅಲ್ಲ, ಆ ಖುಷಿಯಲ್ಲೇ ದರ್ಶನಾರ್ಥಿಗಳಿಗೆ ಕಂಗನ್ ಗಳನ್ನು ಪ್ರಸಾದದ ರೂಪದಲ್ಲಿ ನೀಡಲು ನಿರ್ಧರಿಸಿದ್ದೇವೆ ಎಂದು ಹಿರಿಯ ಉದ್ಯಮಿ ಹೇಳುತ್ತಾರೆ.
ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ (Ram Temple Consecration ceremony) ನಡೆಯಲಿರುವ ಸಂಗತಿ ರಾಮಭಕ್ತರನ್ನು ರೋಮಾಂಚನಗೊಳಿಸಿದೆ. ಹಿಂದೂಗಳಲ್ಲದೆ ಎಲ್ಲ ಧರ್ಮದವರು ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂದಿರಕ್ಕೆ, ರಾಮಜನ್ಮಭೂಮಿ ಟ್ರಸ್ಟ್ ಗೆ ತಮ್ಮಿಂದಾಗುವ ಕಾಣಿಕೆ ನೀಡುತ್ತಿದ್ದಾರೆ. ಉತ್ತರ ಪ್ರದೇಶ ಫಿರೋಜಾಬಾದ್ ನಲ್ಲಿ (Firozabad)ವಿವಿಧ ಬಗೆಯ ಬಳೆ ತಯಾರಿಸುವ ಫ್ಯಾಕ್ಟರಿಯೊಂದರ (kangan manufacturing unit) ಮಾಲೀಕರು, ಪ್ರಾಣ ಪ್ರತಿಷ್ಠೆ ದಿನದಂದು ಮಂದಿರಕ್ಕೆ ಬರುವ ದರ್ಶನಾರ್ಥಿಗಳಿಗೆ ಪ್ರಸಾದದ ರೂಪದಲ್ಲಿ ರಾಮನ ಚಿತ್ರವಿರುವ ಒಂದೊಂದು ಜೊತೆ ಕಂಗನ್ ನೀಡುತ್ತಿದ್ದಾರೆ. ಒಟ್ಟು 10,000 ಜೊತೆ ಬಳೆಗಳನ್ನು ಅವರು ವ್ಯಾನೊಂದರಲ್ಲಿ ತಂದು ರಾಮಜನ್ಮಭೂಮಿ ಟ್ರಸ್ಟ್ ಗೆ ಕೊಟ್ಟಿದ್ದಾರೆ.
ನಮ್ಮ ಕಣ್ಣೆದುರೇ ರಾಮಮಂದಿರ ನಿರ್ಮಾಣಗೊಂಡಿರುವುದು ನಮಲ್ಲಿ ಸಂತಸಭರಿತ ರೋಮಾಂಚನ ಮೂಡಿಸಿದೆ ಮತ್ತು ಕೃತಾರ್ಥ ಭಾವ ತಳೆಯುವಂತೆ ಮಾಡಿದೆ, ಇದು ಸೌಭಾಗ್ಯವಲ್ಲದೆ ಮತ್ತೇನೂ ಅಲ್ಲ, ಆ ಖುಷಿಯಲ್ಲೇ ದರ್ಶನಾರ್ಥಿಗಳಿಗೆ ಕಂಗನ್ ಗಳನ್ನು ಪ್ರಸಾದದ ರೂಪದಲ್ಲಿ ನೀಡಲು ನಿರ್ಧರಿಸಿದ್ದೇವೆ ಎಂದು ಹಿರಿಯ ಉದ್ಯಮಿ ಹೇಳುತ್ತಾರೆ. ಹಿಂದೂ ಮುಸ್ಲಿಂ ಧರ್ಮಗಳಿಗೆ ಸೇರಿದ ಸುಮಾರು 250 ಕೆಲಸಗಾರರು 6 ತಿಂಗಳಿಂದ ಬಳೆ ತಯಾರಿಸುವ ಕೆಲಸದಲ್ಲಿ ತೊಡಗಿದ್ದರು. ರಾಸಾಯನಿಕಗಳನ್ನು ಬಳಿಸಿ ಅತ್ಯುತ್ತಮ ಗುಣಮಟ್ಟದ ಕಂಗನ್ ಗಳನ್ನು ತಯಾರಿಸಲಾಗಿದೆ ಎಂದು ಯುವ ಉದ್ಯಮಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ