ಅಯೋಧ್ಯೆ ತಲುಪಿದ ಗೋವಿಂದಾನಂದ ಸರಸ್ವತಿ ಶ್ರೀಗಳ ಹನುಮಾನ್ ರಥಯಾತ್ರೆ, ಕಿಷ್ಕಿಂದೆಯಲ್ಲಿ ಹನುಮ ಮಂದಿರ ನಿರ್ಮಿಸುವ ಸಂಕಲ್ಪ

ಅಯೋಧ್ಯೆ ತಲುಪಿದ ಗೋವಿಂದಾನಂದ ಸರಸ್ವತಿ ಶ್ರೀಗಳ ಹನುಮಾನ್ ರಥಯಾತ್ರೆ, ಕಿಷ್ಕಿಂದೆಯಲ್ಲಿ ಹನುಮ ಮಂದಿರ ನಿರ್ಮಿಸುವ ಸಂಕಲ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2024 | 5:35 PM

ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿರುವ ದೇವಸ್ಥಾನ ಬಹಳ ಚಿಕ್ಕದು ಮತ್ತು ಅಲ್ಲಿ ಒಂದು ಸಾವಿರ ಭಕ್ತರಿಗೂ ಜಾಗ ಸಾಕಾಗದು. ಆದರೆ, ಬೆಟ್ಟದ ಕೆಳಗೆ ವಿಶಾಲವಾದ ಜಾಗವಿದೆ. ಕರ್ನಾಟಕ ಸರ್ಕಾರ 50 ಎಕರೆ ಜಾಗವನ್ನು ನೀಡಿದರೆ ಅಲ್ಲಿ ಭವ್ಯವಾದ ಹನುಮಾನ್ ಮಂದಿರ ನಿರ್ಮಿಸಬಹುದು ಎಂದು ಅವರು ಹೇಳುತ್ತಾರೆ.

ಅಯೋಧ್ಯೆ: ಕಾಶಿಯಲ್ಲಿ ಜೀಣೋದ್ಧಾರ ಕಾರ್ಯ ಪೂರ್ಣಗೊಂಡಿದೆ, ಅಯೋಧ್ಯೆಯಲ್ಲೂ ಪೂರ್ಣಗೊಂಡಿದೆ ಮತ್ತು ಮಥುರಾದಲ್ಲಿ ಜಾರಿಯಲ್ಲಿದೆ, ಆದರೆ, ಹನುಮಾನ್ ರಥಯಾತ್ರೆ (Bhagvan Hanuman) ಜನ್ಮಸ್ಥಳವಾಗಿರುವ ಕಿಷ್ಕಿಂದೆಯ (Kishkinda) ಪಂಪಾಕ್ಷೇತ್ರದ ಜೀರ್ಣದ್ಧಾರ ಯಾಕಾಗಬಾರದು ಎಂದು ಗೋವಿಂದದಾಸ ಸರಸ್ವತಿ ಶ್ರೀ (Govindananda Saraswati Sri) ಕೇಳುತ್ತಾರೆ. ಹಂಪಿಯಲ್ಲಿ ಅಂದರೆ ಕಿಷ್ಕಿಂದೆಯಲ್ಲಿ ಭವ್ಯವಾದ ಹನುಮಾನ್ ಮಂದಿರ ಸ್ಥಾಪಿಸುವ ಉದ್ದೇಶದೊಂದಿಗೆ ಶ್ರೀಗಳು 12-ವರ್ಷ ಅವಧಿಯ ಹನುಮಾನ್ ರಥಯಾತ್ರೆ ಮೂರು ವರ್ಷಗಳ ಹಿಂದೆ ಆರಂಭಿಸಿದ್ದು ಇಂದು ಹನುಮಾನನ ಆರಾಧ್ಯದೈವ ರಾಮಮ ಜನ್ಮಸ್ಥಳ ಅಯೋಧ್ಯೆಯನ್ನು ತಲುಪಿದೆ. ಹಾಗೆ ನೋಡಿದರೆ, ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಗೋವಿಂದ ದಾಸ ಸರಸ್ವತಿ ಶ್ರೀ ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿದ್ದಾರೆ. ಇವರ ಗುರಿ ಒಂದೇ ಭವ್ಯವಾವ ಹನುಮ ಮಂದಿರ! ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿರುವ ದೇವಸ್ಥಾನ ಬಹಳ ಚಿಕ್ಕದು ಮತ್ತು ಅಲ್ಲಿ ಒಂದು ಸಾವಿರ ಭಕ್ತರಿಗೂ ಜಾಗ ಸಾಕಾಗದು. ಆದರೆ, ಬೆಟ್ಟದ ಕೆಳಗೆ ವಿಶಾಲವಾದ ಜಾಗವಿದೆ. ಕರ್ನಾಟಕ ಸರ್ಕಾರ 50 ಎಕರೆ ಜಾಗವನ್ನು ನೀಡಿದರೆ ಅಲ್ಲಿ ಭವ್ಯವಾದ ಹನುಮಾನ್ ಮಂದಿರ ನಿರ್ಮಿಸಬಹುದು ಎಂದು ಅವರು ಹೇಳುತ್ತಾರೆ. ರಾಜ್ಯ ಸರ್ಕಾರ ಈಗಾಗಲೇ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಅಂತಲೂ ಶ್ರೀಗಳು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ