ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಆತಂಕ ದೂರ ಮಾಡಿ, ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ಸೂಪರ್ ಹೀರೊಗಳು!
ಕೆನಡಾದಲ್ಲರುವ ಒಂದು ಮಕ್ಕಳ ಅಸ್ಪತ್ರೆ ತನ್ನಲ್ಲಿ ಇನ್ಪೇಶಂಟ್ಗಳಾಗಿದ್ದ ಮಕ್ಕಳನ್ನು ಗೆಲುವಾಗಿಸಲು, ಧೈರ್ಯ ತುಂಬಲು ಒಂದು ಅಪೂರ್ವ ಪ್ರಯತ್ನ ಮಾಡಿದೆ. ಕಿಂಗಸ್ಟನ್ ಜನರಲ್ ಆಸ್ಪತ್ರೆಯ ಮಕ್ಕಳ ರೋಗ ವಿಭಾಗವು ಆಸ್ಪತ್ರೆಯಲ್ಲಿ ಶುಶ್ರೂಷೆಗೆ ದಾಖಲಾಗಿದ್ದ ಮಕ್ಕಳರೆದುರು, ಅವರ ನೆಚ್ಚಿನ ಸೂಪರ್ ಹೀರೊಗಳು ಪ್ರತ್ಯಕ್ಷರಾಗುವಂತೆ ಮಾಡಿ ಅವರನ್ನು ಚೀರ್ ಅಪ್ ಮಾಡಿದ್ದಾರೆ.
ಆಸ್ಪತ್ರೆ ವಾಸ ಯಾರಿಗೆ ತಾನೆ ಇಷ್ಟವಾದೀತು? ಇಂಜೆಕ್ಷನ್ ಚುಚ್ಚಲು ಸಿರಿಂಜ್ ಮತ್ತು ಮಾತ್ರೆಗಳನ್ನು ಹಿಡಿದುಕೊಂಡು ಬರುವ ಬಿಳಿಯುಡುಗೆಯ ನರ್ಸ್ಗಳು,ದೇಹದ ಮೇಲೆ ಏಪ್ರನ್ ಧರಿಸಿ ಹಾರದ ಹಾಗೆ ಕುತ್ತಿಗೆಗೆ ಸ್ಟೆತ್ ಬಿಗಿದು ಬರುವ ವೈದ್ಯರ ದೃಶ್ಯ ಬೆಡ್ ಮೇಲೆ ಮಲಗಿರುವ ರೋಗಿಗೆ ಯಾವತ್ತೂ ಅಪ್ಯಾಯಯವೆನಿಸದು. ರೋಗಿ ಚಿಕ್ಕ ಮಗುವಾಗಿದ್ದರೆ ಅದರಲ್ಲಿ ಆತಂಕ ಮನೆಮಾಡೋದ ಸಹಜವೇ. ಯಾವಾಗ ಗುಣಮುಖನಾಗಿ ಮನೆಗೆ ಹೋದೇನು ಅಂತ ಮಗು ಅಂದುಕೊಳ್ಳುತ್ತಿರುತ್ತದೆ, ಮಕ್ಕಳಲ್ಲಿರುವ ಆತಂಕವನ್ನು ದೂರ ಮಾಡಲು ಆಸ್ಪತ್ರೆಯ ವೈದ್ಯರು, ನರ್ಸ್ಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ. ಆದರೆ ಕೆನಡಾದಲ್ಲರುವ ಒಂದು ಮಕ್ಕಳ ಅಸ್ಪತ್ರೆ ತನ್ನಲ್ಲಿ ಇನ್ಪೇಶಂಟ್ಗಳಾಗಿದ್ದ ಮಕ್ಕಳನ್ನು ಗೆಲುವಾಗಿಸಲು, ಧೈರ್ಯ ತುಂಬಲು ಒಂದು ಅಪೂರ್ವ ಪ್ರಯತ್ನ ಮಾಡಿದೆ. ಕಿಂಗಸ್ಟನ್ ಜನರಲ್ ಆಸ್ಪತ್ರೆಯ ಮಕ್ಕಳ ರೋಗ ವಿಭಾಗವು ಆಸ್ಪತ್ರೆಯಲ್ಲಿ ಶುಶ್ರೂಷೆಗೆ ದಾಖಲಾಗಿದ್ದ ಮಕ್ಕಳರೆದುರು, ಅವರ ನೆಚ್ಚಿನ ಸೂಪರ್ ಹೀರೊಗಳು ಪ್ರತ್ಯಕ್ಷರಾಗುವಂತೆ ಮಾಡಿ ಅವರನ್ನು ಚೀರ್ ಅಪ್ ಮಾಡಿದ್ದಾರೆ.
ಟಿವಿ, ವಿಡಿಯೋ ಗೇಮ್ ಮತ್ತು ಕಾಮಿಕ್ಗಳಲ್ಲಿ ಬರುವ ಸೂಪರ್ ಹೀರೋಗಳಾದ ಹಲ್ಕ್, ಐರನ್ ಮಾನ್ ಮತ್ತು ಇನ್ನೂ ಹಲವಾರು ಕ್ಯಾರೆಕ್ಟರ್ಗಳಂತೆ ವೇಷ ಧರಿಸಿದ ಎಲೀಟ್ ವಿಂಡೋ ಕಂಪನಿಯ ಉದ್ಯೋಗಿಗಳು ರೂಫ್ಗೆ ಕಟ್ಟಿದ ಹಗ್ಗದಿಂದ ಕಿಟಕಿಗಳ ಹತ್ತಿರ ನೇತಾಡುತ್ತಾ ಬಂದು ಮಕ್ಕಳಲ್ಲಿ ಸಂತೋಷ ಮತ್ತು ಆಶ್ಚರ್ಯ ಹುಟ್ಟಿಸಿದ್ದಾರೆ. ಅವರನ್ನು ನೋಡಿ ತಮ್ಮ ವಾರ್ಡ್ಗಳ ಬೆಡ್ ಮೇಲೆ ಮಲಗಿದ್ದ ಮಕ್ಕಳು ಹೋ ಎಂದು ಚಿರುತ್ತಾ ಅವರನ್ನು ಗ್ರೀಟ್ ಮಾಡಿದ್ದಾರೆ. ಸದರಿ ಆಸ್ಪತ್ರೆಯು ಈ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಆಪಲೋಡ್ ಮಾಡಿದ್ದು ಅವು ವೈರಲ್ ಆಗಿವೆ,
ಆಸ್ಪತ್ರೆಯು ತನ್ನ ಟ್ವೀಟ್ನಲ್ಲಿ, ‘ನಮ್ಮ ಹೆಲ್ತ್ಕೇರ್ ಸಿಬ್ಬಂದಿಗೆ ಇಂದು ಅಪೂರ್ವವಾದ ಬೆಂಬಲ ಸಿಕ್ಕಿತು- # ಸೂಪರ್ಹೀರೊಗಳು ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. @EliteWindowC ಹಗ್ಗದ ಮೂಲಕ ಕಟ್ಟಡದ ಕೆಳಗಡೆ ಜಾರುತ್ತಾ ಕಿಟಕಿಗಳ ಮೇಲೆ ಕೊಳೆಯನ್ನು ಸ್ವಚ್ಛ ಮಾಡುವುದರ ಜೊತೆಗೆ; ಮಕ್ಕಳಿಗೆ, ಅವರ ಪೋಷಕರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅತ್ಯಗತ್ಯವಾಗಿ ಬೇಕಿದ್ದ ಮೋಜು ಮತ್ತು ಚಿತ್ತಚಂಚಲತೆಯನ್ನು ಒದಗಿಸಿದರು,’ ಎಂದು ಹೇಳಿದೆ.
ಎಂಥ ಅದ್ಭುತ ಪರಿಕಲ್ಪನೆ ಅಲ್ಲವೇ?
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!
