ರಾಯಚೂರಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಕಟಾವು ಮಾಡಿ ಒಳಗಲು ಹಾಕಿದ್ದ ಭತ್ತ ನಾಶ, ರೈತರು ಕಂಗಾಲು

Updated on: May 14, 2025 | 12:51 PM

ಸುಲ್ತಾನಪುರದ ಸ್ಥಿತಿ ಹೇಗಾಗಿದೆ ಅಂತ ನೋಡಿ. ಊರೊಳಗೆ ನೀರು ಹರಿದು ಬಂದಿದೆ ಮತ್ತು ಕೆಲ ಮನೆಗಳು ಮತ್ತು ಗುಡಿಗಳು ಜಲಾವೃಗೊಂಡಿವೆ. ವಿಡಿಯೋದಲ್ಲಿ ಕಾಣುತ್ತಿರುವ ಭತ್ತ ರೈತರಾದ ಹನುಮಂತ, ರಾಮಣ್ಣ ಲಕ್ಷ್ಮಣ, ನಾಗೇಶ್ ಮತ್ತು ತಿಪ್ಪಣ್ಣ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಊರಿನ ರಸ್ತೆಗಳಲ್ಲೂ ನೀರು ಹೊಳೆಯಂತೆ ಹರಿಯುತ್ತಿದೆ. ಬಿಸಿಲ ತಾಪದಿಂದ ಜನ ಎಷ್ಟೇ ಬೇಸತ್ತಿದ್ದರೂ ಇಂಥ ಅವಕಾಳಿ ಮಳೆಯನ್ನು ಹೇಗೆ ಸ್ವಾಗತಿಸಿಯಾರು?

ರಾಯಚೂರು, ಮೇ 14: ರಾಯಚೂರು ಜಿಲ್ಲೆಯ ಹಲವಾರು ಭಾಗಗಳಲ್ಲಿ ನಿನ್ನೆ ಸುರಿದ ಮಳೆ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸುಲ್ತಾನಪುರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ನಿನ್ನೆ ಸಾಯಂಕಾಲ ಭಾರೀ ಮಳೆಯಾಗಿರುವುದರಿಂದ ರೈತರು ಕಟಾವು ಮಾಡಿ ಒಣಗಲು ಹಾಕಿದ್ದ ಭತ್ತ (paddy) ಮಳೆನೀರಿಗೆ ಕೊಚ್ಚಿಕೊಂಡು ಹೋಗಿದೆ, ಕುಪ್ಪೆಯಲ್ಲಿ ಭತ್ತ ಉಳಿದಿದ್ದರೂ ಅದು ಹಾಳಾದಂತೆಯೇ. ಕಷ್ಟಪಟ್ಟು ಬೆಳೆದ ಭತ್ತ ಹೀಗೆ ನೀರುಪಾಲಾಗಿದ್ದು ಅನ್ನದಾತರನ್ನು ಕಂಗಾಲಾಗಿಸಿದೆ. ನಿನ್ನೆ ರಾಜ್ಯದ ಬಹುತೇಕ ಭಾಗಗಳಲ್ಲಿ ಅಕಾಲಿಕ ಮತ್ತು ಉತ್ತರ ಕರ್ನಾಟಕದವರು ಹೇಳುವಂತೆ ಅವಕಾಳಿ ಮಳೆಯಾಗಿದೆ.

ಇದನ್ನೂ ಓದಿ:ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಹುಬ್ಬಳ್ಳಿಯಲ್ಲಿ ಮನೆಗಳಿಗೆ ನುಗ್ಗಿದ ನೀರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 14, 2025 11:10 AM