ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಸರ್ವನಾಶವಾದರೂ ಕೃಷಿ ಅಧಿಕಾರಿಗಳು ರೈತರ ಬವಣೆ ವಿಚಾರಿಸುವ ಗೋಜಿಗೆ ಹೋಗಿಲ್ಲ
ಉಮೇಶ್ ಗೌಡರ್ ಹೆಸರಿನ ರೈತರಿಗೆ ಸೇರಿದ ಹೊಲ ಇದಾಗಿದೆ. ಅಕಾಲಿಕವಾಗಿ ಒಂದೇ ಸಮನೆ ಸುರಿದ ಮಳೆಯಿಂದ ಅವರು ತಮ್ಮ 12 ಎಕರೆ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ದನಕರುಗಳಿಗೂ ಆಹಾರವಾಗಿ ಕೊಡದಷ್ಟು ಹಾಳಾಗಿ ಹೋಗಿದೆ.
ಈ ಬಾರಿಯ ಅಕಾಲಿಕ ಸೃಷ್ಟಿಸಿರುವ ತೊಂದರೆಗಳು ಒಂದೆರಡಲ್ಲ. ಬೆಳೆ ಹಾಳಾಗಿವೆ, ಮನೆಗಳು ಕುಸಿದಿವೆ, ನದಿಗಳಲ್ಲಿ ಪ್ರವಾಹದಂಥ ಪರಿಸ್ಥಿತಿ ತೋರಿದ್ದರಿಂದ ನದಿಪಾತ್ರದಲ್ಲಿನ ಊರುಗಳ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ, ಸೇತುವೆಗಳು ಕೊಚ್ಚಿಕೊಂಡು ಹೋಗಿವೆ ಮತ್ತು ರಸ್ತೆಗಳು ಹೊಂಡಗಳಾಗಿ ಮಾರ್ಪಟ್ಟಿವೆ. ವಯಸ್ಸಾದವರು ಸತತವಾಗಿ ಸುರಿದ ಮಳೆಯಿಂದಾಗಿ ಅನಾರೋಗ್ಯಕ್ಕೀಡಾಗಿದ್ದಾರೆ. ಸಮಸ್ಯೆಗಳ ಪಟ್ಟಿ ಚಿಕ್ಕದಲ್ಲ. ಬೆಳಗಾವಿಯ ಟಿವಿ9 ವರದಿಗಾರರು ಒಂದು ವರದಿಯನ್ನು ಕಳಿಸಿದ್ದಾರೆ. ರೈತರು ಅನುಭವಿಸಿರುವ ನಷ್ಟದ ಪ್ರಮಾಣ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.
ವಿಡಿಯೋವನ್ನು ಸವದತ್ತಿ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಶೂಟ್ ಮಾಡಲಾಗಿದೆ. ಉಮೇಶ್ ಗೌಡರ್ ಹೆಸರಿನ ರೈತರಿಗೆ ಸೇರಿದ ಹೊಲ ಇದಾಗಿದೆ. ಅಕಾಲಿಕವಾಗಿ ಒಂದೇ ಸಮನೆ ಸುರಿದ ಮಳೆಯಿಂದ ಅವರು ತಮ್ಮ 12 ಎಕರೆ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ದನಕರುಗಳಿಗೂ ಆಹಾರವಾಗಿ ಕೊಡದಷ್ಟು ಹಾಳಾಗಿ ಹೋಗಿದೆ. ಉಮೇಶ್ ಅವರು ಹೂಡಿದ ಲಕ್ಷಾಂತರ ಹಣ ಅಕ್ಷರಶಃ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ.
ಉಮೇಶ್ ಅವರಿಗೆ ಸೇರಿದ ಜಮೀನಿನ ಪಕ್ಕದಲ್ಲಿ ಮತ್ತೊಬ್ಬ ರೈತರ ಹತ್ತಿ ಬೆಳೆ ಸಹ ಹಾಳಾಗಿ ಹೋಗಿದೆ. ಈ ರೈತರು ಮಳೆಯನ್ನು ಶಪಿಸುತ್ತಿರುವುದು ನಿಜವೇ, ಆದರೆ ಅದಕ್ಕಿಂತ ಹೆಚ್ಚು ಆಕ್ರೋಶವನ್ನು ಇದುವರೆಗೆ ಸ್ಥಳಕ್ಕೆ ಭೇಟಿ ನೀಡದ ಕೃಷಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ