ನಾನು ಮತ್ತು ಉಪೇಂದ್ರ ಲವರ್ಸ್ ರೀತಿ ಆಗಿದ್ದೇವೆ ಎಂದ ಶಿವರಾಜ್ಕುಮಾರ್
ಭಾನುವಾರ (ಅಕ್ಟೋಬರ್ 10) ಸಲಗ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತು. ಅದಕ್ಕೆ ಪುನೀತ್, ಶಿವರಾಜ್ಕುಮಾರ್, ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು.
ಶಿವರಾಜ್ಕುಮಾರ್ ಹಾಗೂ ಉಪೇಂದ್ರ ನಡುವೆ ಈಗಲೂ ಒಳ್ಳೆಯ ಬಾಂಧವ್ಯ ಇದೆ. ಶಿವಣ್ಣ ನಟಿಸಿದ್ದ ‘ಓಂ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು ಉಪ್ಪಿ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅತಿ ಹೆಚ್ಚು ಬಾರಿ ಸಿನಿಮಾ ಚಿತ್ರಮಂದಿರಗಳಲ್ಲಿ ರಿ ರೀಲೀಸ್ ಆಗಿತ್ತು. ಈ ಕಾರಣಕ್ಕೆ ಉಪೇಂದ್ರ ಮೇಲೆ ಶಿವರಾಜ್ಕುಮಾರ್ಗೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರೀತಿ. ಇದನ್ನು ಅವರು ವೇದಿಕೆ ಮೇಲೆ ಓಪನ್ ಆಗಿ ಹೇಳಿದ್ದಾರೆ.
ಭಾನುವಾರ (ಅಕ್ಟೋಬರ್ 10) ಸಲಗ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತು. ಅದಕ್ಕೆ ಪುನೀತ್, ಶಿವರಾಜ್ಕುಮಾರ್, ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಾನು ಮತ್ತು ಉಪೇಂದ್ರ ಲವರ್ಸ್ ಇದ್ದಂತೆ ಎನ್ನುವ ಮಾತನ್ನು ಶಿವರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್ ಡೈರೆಕ್ಟರ್, ಸಂತೋಷ್ ಆನಂದ್ರಾಮ್ ಡೈಲಾಗ್ ರೈಟರ್
ವರ್ಷದ ಹಿಂದೆ ವ್ಹೀಲ್ಚೇರ್ ಮೇಲೆ ಸತ್ಯಜಿತ್ ನಮ್ಮನೆಗೆ ಬಂದಿದ್ದರು; ಪುನೀತ್ ರಾಜ್ಕುಮಾರ್