‘ಒಂದು ಗೋಲ್ಡನ್​ ಅವಕಾಶ ಕೈ ತಪ್ಪಿದೆ’; ನಿರ್ದೇಶನದ ಬಗ್ಗೆ ಉಪೇಂದ್ರ ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Mar 26, 2022 | 9:55 PM

ಅಪ್ಪು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ ಎಲ್ಲ ಕಡೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು (ಮಾರ್ಚ್​ 26) ಉಪೇಂದ್ರ ಅವರು ಈ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಆ ಬಳಿಕ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ

ಪುನೀತ್​ ರಾಜ್​ಕುಮಾರ್ (Puneeth Rajkumar) ಇಷ್ಟುಬೇಗ ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ (James Movie) ಎಲ್ಲ ಕಡೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು (ಮಾರ್ಚ್​ 26) ಉಪೇಂದ್ರ (Upendra) ಅವರು ಈ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಆ ಬಳಿಕ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ‘ಓರ್ವ ನಿರ್ದೇಶಕನಾಗಿ ಹೇಳಬೇಕು ಎಂದರೆ ನಾನು ಒಂದು ಗೋಲ್ಡನ್ ಅವಕಾಶವನ್ನು ಮಿಸ್ ಮಾಡಿಕೊಂಡೆ. ಅವರಿಗೆ ಆ್ಯಕ್ಷನ್​ಕಟ್​ ಹೇಳುವ ಅವಕಾಶ ನನಗೆ ಸಿಗಲೇ ಇಲ್ಲ. ಜೇಮ್ಸ್ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಆ್ಯಕ್ಷನ್​ ದೃಶ್ಯಗಳು ರೋಮಾಂಚನಕಾರಿಯಾಗಿದೆ. ಇಂಟರ್​ವಲ್​ ಟ್ವಿಸ್ಟ್​ಗೆ ಥ್ರಿಲ್​ ಆಗಿಬಿಟ್ಟೆ’ ಎಂದಿದ್ದಾರೆ ಉಪೇಂದ್ರ. ನಟನೆ ಮಾತ್ರವಲ್ಲದೆ, ನಿರ್ದೇಶನದ ಮೂಲಕವೂ ಉಪೇಂದ್ರ ಹೆಸರು ಮಾಡಿದ್ದಾರೆ. ಅವರು ನಿರ್ದೇಶನಕ್ಕೆ ಕಂಬ್ಯಾಕ್​ ಮಾಡುವ ಬಗ್ಗೆ ಇತ್ತೀಚೆಗೆ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಮನೆಯಲ್ಲಿ ಎನರ್ಜಿ ಚೇಂಜ್​ ಆಗ್ಬೇಕು ಅಂದ್ರೆ ಏನು ಮಾಡ್ಬೇಕು?; ಪ್ರಿಯಾಂಕಾ ಉಪೇಂದ್ರ ಕೊಟ್ರು ಟಿಪ್ಸ್​

ಉಪ್ಪಿ ಡೈರೆಕ್ಷನ್​ ಸಿನಿಮಾ ಟೈಟಲ್​ ಅರ್ಥವೇನು?; ಎಲ್ಲವನ್ನೂ ವಿವರಿಸಿದ ಪ್ರಿಯಾಂಕಾ ಉಪೇಂದ್ರ

Published on: Mar 26, 2022 08:13 PM