ಪಾಕಿಸ್ತಾನದಲ್ಲಿಂದು ಇರಾನ್-ಅಮೆರಿಕ ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್‌ಡೌನ್!
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ನಾಯಕರ ಸುರಕ್ಷತೆಗಾಗಿ ಇಡೀ ನಗರವನ್ನು ಬಂದ್ ಮಾಡಿ, ಬಿಗಿ ಭದ್ರತೆ ಒದಗಿಸಲಾಗಿದೆ. ಮಾತುಕತೆಗೂ ಮುನ್ನ ಇರಾನ್ ಸ್ಪೀಕರ್ ಅಮೆರಿಕದ ಮೇಲೆ ನಂಬಿಕೆ ಇಲ್ಲ ಎಂದು ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿದ್ದು, ಉಭಯ ರಾಷ್ಟ್ರಗಳ ಷರತ್ತುಗಳ ಬಗ್ಗೆ ಚರ್ಚೆಯಾಗಲಿದೆ.
ಇಸ್ಲಾಮಾಬಾದ್, ಏಪ್ರಿಲ್ 11: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆರಂಭಗೊಂಡಿದೆ. ಈ ಮಹತ್ವದ ಸಭೆಯಲ್ಲಿ ಅಮೆರಿಕವನ್ನು ಉಪಾಧ್ಯಕ್ಷ ಜೆಡಿ ಬ್ಯಾನ್ಸ್ ಪ್ರತಿನಿಧಿಸುತ್ತಿದ್ದರೆ, ಇರಾನ್ ಸ್ಪೀಕರ್ ಮೊಹಮ್ಮದ್ ಭಗರ್ ಭಾಗಿಯಾಗಲಿದ್ದಾರೆ. ಮಾತುಕತೆಗೂ ಮುನ್ನ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿತ್ತು. ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳು ಮತ್ತು ಅವುಗಳ ಷರತ್ತುಗಳ ಕುರಿತು ಇಂದು ಚರ್ಚೆ ನಡೆಯಲಿದೆ.
ನಾಯಕರ ಸುರಕ್ಷತೆ ದೃಷ್ಟಿಯಿಂದ ಇಸ್ಲಾಮಾಬಾದ್ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ. ಸಭೆ ನಡೆಯುವ ಸೆರೆನಾ ಹೋಟೆಲ್ ಸುತ್ತಮುತ್ತ ಮೂರು ಕಿಲೋಮೀಟರ್ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭದ್ರತೆಗಾಗಿ 11,000 ಸೈನಿಕರನ್ನು ನಿಯೋಜಿಸಲಾಗಿದೆ. ಸಭೆಗೂ ಮುನ್ನವೇ ಅಮೆರಿಕದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಇರಾನ್ ಸಂಸದೀಯ ಸ್ಪೀಕರ್ ಗಾಲಿಬಾಫ್ ಹೇಳಿಕೆ ನೀಡಿರುವುದು ಸಭೆಯ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

