Shivamogga News; ಸಭಾಧ್ಯಕ್ಷ ಪೀಠದಲ್ಲಿ ಕೂರಲು ಯುಟಿ ಖಾದರ್ ಅರ್ಹರಲ್ಲ: ಕೆಎಸ್ ಈಶ್ವರಪ್ಪ, ಮಾಜಿ ಶಾಸಕ

|

Updated on: Jul 22, 2023 | 4:14 PM

ಸಭಾಪತಿ ಯುಟಿ ಖಾದರ್ ಧಾವಂತದಲ್ಲಿ ತಾವೆಸಗಿದ ತಪ್ಪನ್ನು ಅರ್ಥಮಾಎಡಿಕೊಂಡು ಅದನ್ನು ಸರಿಪಡಿಸಲು ಅವಕಾಶವಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ,

ಶಿವಮೊಗ್ಗ: ವಿಧಾನಸಭಾ ಅಧೀವೇಶನ ಜಾರಿಯಲ್ಲಿದ್ದಾಗ ಬಿಜೆಪಿ 10 ಶಾಸಕರನ್ನು ಅಮಾನತು ಮಾಡಿದ ಕ್ರಮವನ್ನು ವಿರೋಧಿಸಿ ನಗರದಲ್ಲಿ ಪಕ್ಷದ ಕಾರ್ಯಕರ್ತರು, ಹಿರಿಯ ನಾಯಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಮಾಜಿ ಶಾಸಕ ಕೆ ಎಸ್ ಈಶ್ವರಪ್ಪ (KS Eshwarappa), ಕಾಂಗ್ರೆಸ್ ಸರ್ಕಾರ ಸಂವಿಧಾನಬಾಹಿರ ಕೃತ್ಯಗಳನ್ನು ನಡೆಸುತ್ತಿದೆ, ಬಿಜೆಪಿ ಶಾಸಕರನ್ನು ಅಧಿವೇಶನದಿಂದ ಸಸ್ಪೆಂಡ್ ಮಾಡಿದ್ದು ಸಂವಿಧಾನದ (Constituency) ಆಶಯಗಳಿಗೆ ವಿರುದ್ಧವಾದದ್ದು ಎಂದು ಹೇಳಿದರು. ಸಭಾಪತಿ ಯುಟಿ ಖಾದರ್ ಧಾವಂತದಲ್ಲಿ ತಾವೆಸಗಿದ ತಪ್ಪನ್ನು ಅರ್ಥಮಾಎಡಿಕೊಂಡು ಅದನ್ನು ಸರಿಪಡಿಸಲು ಅವಕಾಶವಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಅಸಲಿಗೆ ಅವರು ಸಭಾಧ್ಯಕ್ಷನ ಪೀಠದಲ್ಲಿ ಕೂರಲು ಅರ್ಹರಲ್ಲ ಎಂದು ಈಶ್ವರಪ್ಪ ಹೇಳಿದರು. ಪ್ರತಿಭಟನೆಯಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ (Araga Jnanendra), ಚನ್ನಬಸಪ್ಪ (Channabassappa) ಮತ್ತು ಇತರ ಕಾರ್ಯಕರ್ತರು ಭಾಗವಹಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on