ಅಂಕೋಲಾ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂಪಾಯಿ ಪತ್ತೆ

ಅಂಕೋಲಾ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂಪಾಯಿ ಪತ್ತೆ

ಸೂರಜ್ ಪ್ರಸಾದ್ ಎಸ್.ಎನ್
| Updated By: ವಿವೇಕ ಬಿರಾದಾರ

Updated on: Jan 29, 2025 | 7:35 AM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕ್ರೆಟಾ ಕಾರಿನಲ್ಲಿ 1 ಕೋಟಿ 14 ಲಕ್ಷ 99 ಸಾವಿರ 500 ರೂಪಾಯಿ ನಗದು ಪತ್ತೆಯಾಗಿದೆ. ಕಾರಿನಲ್ಲಿ ಮೂರು ನಂಬರ್ ಪ್ಲೇಟ್‌ಗಳು ಸಹ ಪತ್ತೆಯಾಗಿವೆ. ಈ ಕಾರು ಮಂಗಳೂರಿನದ್ದೆಂದು ಶಂಕಿಸಲಾಗಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.

ಕಾರವಾರ, ಜನವರಿ 29: ಉತ್ತರ ಕನ್ನಡ (Uttar Kannada) ಜಿಲ್ಲೆ ಅಂಕೋಲಾ (Ankola) ತಾಲೂಕಿನ ರಾಮನಗುಳಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರಿನಲ್ಲಿ 1 ಕೋಟಿ ರೂ. ಪತ್ತೆಯಾಗಿದೆ. ಜೊತೆಗೆ, ಕಾರಿನಲ್ಲಿ ಕೆಎ19 ಪಾಸಿಂಗ್​ನ ಮೂರು ನಂಬರ್ ಪ್ಲೇಟ್ ಪತ್ತೆಯಾಗಿವೆ. ಪತ್ತೆಯಾದ ಕಾರು ಮಂಗಳೂರು ಮೂಲದ್ದಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.

ಹೆದ್ದಾರಿ ಪಕ್ಕ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಕಾರ್ ಅನ್ನು ಪರಿಶೀಲಿಸಿದಾಗ ಲಾಕರ್ ಪತ್ತೆಯಾಗಿದೆ. ಲಾಕರ್ ತೆರೆದಾಗ, ಅದರಲ್ಲಿದ್ದ ಬ್ಯಾಗ್​ನಲ್ಲಿ 1,14,99,500 ರೂಪಾಯಿ ಪತ್ತೆಯಾಗಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.