Loading video

ವಿಧಾನಸಭೆಯ ಬಾಗಿಲಲ್ಲೇ ಪಾನ್ ಮಸಾಲ ಉಗುಳಿದ ಶಾಸಕ

|

Updated on: Mar 04, 2025 | 8:26 PM

ಉತ್ತರ ಪ್ರದೇಶದ ವಿಧಾನಸಭೆಯಲ್ಲಿ 'ಪಾನ್ ಮಸಾಲ' ಉಗುಳಿದ್ದಕ್ಕಾಗಿ ಉತ್ತರ ಪ್ರದೇಶದ ಸ್ಪೀಕರ್ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಆ ಶಾಸಕರ ಹೆಸರನ್ನು ಹೇಳದೆ ಸ್ಪೀಕರ್ ತರಾಟೆ ತೆಗೆದುಕೊಂಡಿದ್ದಾರೆ. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ, ನಮ್ಮ ವಿಧಾನಸಭಾ ಸಭಾಂಗಣದಲ್ಲಿ, ಕೆಲವು ಸದಸ್ಯರು ಪಾನ್ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿತು. ಹಾಗಾಗಿ, ನಾನು ಇಲ್ಲಿಗೆ ಬಂದು ಸ್ವಚ್ಛಗೊಳಿಸಿದೆ ಎಂದು ಸ್ಪೀಕರ್ ಹೇಳಿದ್ದಾರೆ.

ಲಕ್ನೋ (ಮಾರ್ಚ್ 4): ಉತ್ತರ ಪ್ರದೇಶದ ವಿಧಾನಸಭಾ ಸ್ಪೀಕರ್ ಸತೀಶ್ ಮಹಾನಾ ಇಂದು ಕೆಲವು ವಿಧಾನಸಭಾ ಶಾಸಕರು ಪಾನ್ ಮಸಾಲ ಸೇವಿಸಿದ ನಂತರ ವಿಧಾನಸಭಾ ಸಭಾಂಗಣದಲ್ಲಿ ಉಗುಳಿದ್ದಾರೆ ಎಂದು ಹೇಳಿದ್ದಾರೆ. ಇಂದು ಸದನದ ಆರಂಭಕ್ಕೂ ಮುನ್ನ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸ್ವತಃ ಆ ಪ್ರದೇಶವನ್ನು ನಾನೇ ಸ್ವಚ್ಛಗೊಳಿಸಿದ್ದೇನೆ. ನಾನು ವಿಡಿಯೋದಲ್ಲಿ ಆ ಶಾಸಕ ಯಾರೆಂಬುದನ್ನು ಕೂಡ ನೋಡಿದ್ದೇನೆ ಎಂದು ಹೇಳಿದ್ದಾರೆ. ವಿಧಾನಸಭಾ ಬಾಗಿಲಲ್ಲಿ ಪಾನ್ ಮಸಾಲ ಉಗುಳಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ