ಮಗುವನ್ನು ಕೊಂದ ಅಪರಾಧ; ಯುಎಇಯಲ್ಲಿ ಗಲ್ಲಿಗೇರಿದ ಉತ್ತರ ಪ್ರದೇಶದ ಮಹಿಳೆ
ಶಿಶುವನ್ನು ಕೊಂದಿದ್ದಕ್ಕಾಗಿ ಉತ್ತರ ಪ್ರದೇಶದ ಮಹಿಳೆಯಾದ ಶಹಜಾದಿ ಖಾನ್‌ಗೆ ಯುಎಇಯಲ್ಲಿ ಮರಣದಂಡನೆ ವಿಧಿಸಲಾಯಿತು. ಆಕೆಯನ್ನು ಗಲ್ಲಿಗೇರಿಸಲಾಗಿದ್ದು, ಮಾರ್ಚ್ 5ರಂದು ಅಂತ್ಯಕ್ರಿಯೆ ನಡೆಯಲಿದೆ. ಶಹಜಾದಿ ಖಾನ್ 2022ರ ಡಿಸೆಂಬರ್ 19ರಂದು ಪ್ರವಾಸಿ ವೀಸಾದಲ್ಲಿ ಅಬುಧಾಬಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಆಕೆಯನ್ನು ಕೇರ್‌ಟೇಕರ್ ಆಗಿ ನೇಮಿಸಲಾಯಿತು. ಫೆಬ್ರವರಿ 2023ರಲ್ಲಿ ಆಕೆ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಗು ಸಾವನ್ನಪ್ಪಿತ್ತು. ತಮ್ಮ ಶಿಶುವಿನ ಸಾವಿಗೆ ಶಹಜಾದಿ ಖಾನ್ ಕಾರಣ ಎಂದು ಆ ಮಗುವಿನ ಪೋಷಕರು ಆರೋಪಿಸಿದ್ದರು. ಇದಾದ ನಂತರ ಆಕೆಯನ್ನು ಬಂಧಿಸಲಾಗಿತ್ತು.

ನವದೆಹಲಿ, (ಮಾರ್ಚ್ 3): ಉತ್ತರ ಪ್ರದೇಶದ 33 ವರ್ಷದ ಮಹಿಳಾ ಕೇರ್‌ಟೇಕರ್ ಶಹಜಾದಿ ಖಾನ್ ಅವರನ್ನು ಫೆಬ್ರವರಿ 15ರಂದು ಯುಎಇಯಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಇಂದು (ಮಾರ್ಚ್ 3) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಅವರು ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯ ಶಿಶುವಿನ ಕೊಲೆ ಆರೋಪದ ಮೇಲೆ ಆಕೆಗೆ ಮರಣದಂಡನೆ ವಿಧಿಸಲಾಗಿತ್ತು. ಗಲ್ಲಿಗೇರಿದ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ.
ಶಹಜಾದಿ ಖಾನ್ ಡಿಸೆಂಬರ್ 19, 2022ರಂದು ಪ್ರವಾಸಿ ವೀಸಾದಲ್ಲಿ ಅಬುಧಾಬಿಗೆ ಪ್ರಯಾಣಿಸಿದ್ದರು.ಅಲ್ಲಿ ಆಕೆಯನ್ನು ಮಗುವಿನ ಕೇರ್‌ಟೇಕರ್ ಆಗಿ ನೇಮಿಸಲಾಗಿತ್ತು. ಫೆಬ್ರವರಿ 2023ರಲ್ಲಿ ಆಕೆಯನ್ನು ನೇಮಿಸಿಕೊಂಡ ದಂಪತಿಗಳು ತಮ್ಮ ಮಗುವಿನ ಸಾವಿಗೆ ಆಕೆಯೇ ಕಾರಣ ಎಂದು ಆರೋಪಿಸಿದ್ದರು. ಇದಾದ ನಂತರ ಆಕೆಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Kolkata: 7 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಮರಣದಂಡನೆ
ಜುಲೈ 31, 2023ರಂದು ಆಕೆಗೆ ಮರಣದಂಡನೆ ವಿಧಿಸಲಾಯಿತು. 2024ರ ಫೆಬ್ರವರಿ 28ರಂದು ನ್ಯಾಯಾಲಯವು ಈ ತೀರ್ಪನ್ನು ಎತ್ತಿಹಿಡಿಯಿತು. ಆಕೆಯ ಮರಣದಂಡನೆಗೆ ಮುಂಚಿತವಾಗಿ ಆಕೆಯನ್ನು ಅಲ್ ವಾಥ್ಬಾ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಆಕೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರೂ ಅದು ಸ್ವೀಕೃತವಾಗಲಿಲ್ಲ.
ವರ್ಷಗಟ್ಟಲೆ ಲಸಿಕೆ ನೀಡಿ ಆಕೆ ಮಗುವನ್ನು ಕೊಂದಿದ್ದಾಳೆ ಎಂಬ ಆರೋಪದಲ್ಲಿ ಆಕೆಗೆ ಮರಣದಂಡನೆ ವಿಧಿಸಲಾಗಿತ್ತು. ಈಗಾಗಲೇ ಗಲ್ಲುಶಿಕ್ಷೆಗೆ ಒಳಗಾಗಿರುವ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ. ಆಕೆಯ ಅಂತ್ಯಕ್ರಿಯೆಗಾಗಿ ಅಬುಧಾಬಿಗೆ ಪ್ರಯಾಣದ ವ್ಯವಸ್ಥೆ ಮಾಡಲು ಭಾರತೀಯ ರಾಯಭಾರ ಕಚೇರಿ ಆಕೆಯ ಕುಟುಂಬಕ್ಕೆ ಸಹಾಯ ಮಾಡುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ