AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲರ್​ಗಳಿಂದ ನಡೆಯುತ್ತೆ ಅತ್ಯಾಚಾರ, ಬ್ರಿಟನ್ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ಹೇಗೆ ನಡೆಸಿಕೊಳ್ತಾರೆ?

ಬ್ರಿಟನ್​ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವ ಭಯಾನಕ ಸತ್ಯವನ್ನು ಮಹಿಳಾ ಕೈದಿಯೊಬ್ಬಳು ಬಿಚ್ಚಿಟ್ಟಿದ್ದಾಳೆ. 6 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಕೈದಿ, ಜೈಲಿನಲ್ಲಿ ಜೈಲರ್​ಗಳಿಂದ ಮಹಿಳಾ ಕೈದಿಗಳ ಮೇಲೆ ಅತ್ಯಾಚಾರ ನಡೆಯುತ್ತೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾಳೆ. ಜೈಲುಗಳು ಅಪರಾಧಿಗಳ ಸುಧಾರಣೆಗಾಗಿ ಇರಬೇಕಿತ್ತು, ಆದರೆ ಮಹಿಳಾ ಕೈದಿಗಳಿಗೆ ಶಾಪವಾಗಿ ಪರಿಣಮಿಸಿದೆ. ಅವರನ್ನು ಜೈಲರ್​ಗಳು ಜೀವಂತ ಶವಗಳನ್ನಾಗಿ ಮಾಡುತ್ತಿದ್ದಾರೆ ಎಂದು ಕೈದಿ ಫ್ರಾನ್ಸೆಸ್ಕಾ ಅವರು ಹೇಳಿದ್ದಾರೆ. ಈ ಕುರಿತು ಏಕ್ ಝಲಕ್ ಇಂಗ್ಲಿಷ್ ವರದಿ ಮಾಡಿದೆ. 

ಜೈಲರ್​ಗಳಿಂದ ನಡೆಯುತ್ತೆ ಅತ್ಯಾಚಾರ, ಬ್ರಿಟನ್ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ಹೇಗೆ ನಡೆಸಿಕೊಳ್ತಾರೆ?
ಕೈದಿImage Credit source: BBC
ನಯನಾ ರಾಜೀವ್
|

Updated on: Mar 03, 2025 | 11:09 AM

Share

ಬ್ರಿಟನ್, ಮಾರ್ಚ್​ 03: ಬ್ರಿಟನ್​ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವ ಭಯಾನಕ ಸತ್ಯವನ್ನು ಮಹಿಳಾ ಕೈದಿಯೊಬ್ಬಳು ಬಿಚ್ಚಿಟ್ಟಿದ್ದಾಳೆ. 6 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಕೈದಿ, ಜೈಲಿನಲ್ಲಿ ಜೈಲರ್​ಗಳಿಂದ ಮಹಿಳಾ ಕೈದಿಗಳ ಮೇಲೆ ಅತ್ಯಾಚಾರ ನಡೆಯುತ್ತೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾಳೆ.

ಜೈಲುಗಳು ಅಪರಾಧಿಗಳ ಸುಧಾರಣೆಗಾಗಿ ಇರಬೇಕಿತ್ತು, ಆದರೆ ಮಹಿಳಾ ಕೈದಿಗಳಿಗೆ ಶಾಪವಾಗಿ ಪರಿಣಮಿಸಿದೆ. ಅವರನ್ನು ಜೈಲರ್​ಗಳು ಜೀವಂತ ಶವಗಳನ್ನಾಗಿ ಮಾಡುತ್ತಿದ್ದಾರೆ ಎಂದು ಕೈದಿ ಫ್ರಾನ್ಸೆಸ್ಕಾ ಅವರು ಹೇಳಿದ್ದಾರೆ. ಈ ಕುರಿತು ಏಕ್ ಝಲಕ್ ಇಂಗ್ಲಿಷ್ ವರದಿ ಮಾಡಿದೆ.

ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಫ್ನಾನ್ಸೆಸ್ಕಾ ಬ್ರಿಟನ್​ನಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಳು, ಇಂಗ್ಲೆಂಡ್ ನಿವಾಸಿಯಾದ ಆಕೆ 31 ನೇ ವಯಸ್ಸಿನಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆಕೆ ರಹಸ್ಯವಾಗಿ ಮಾದಕವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

ಜೈಲಿನಲ್ಲಿ ಏನಾಗಿತ್ತು? ನ್ಯಾಯಾಲಯವು 6 ವರ್ಷಗಳ ಶಿಕ್ಷೆ ವಿಧಿಸಿತ್ತು, ತನ್ನಂತೆಯೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಲವಾರು ಮಹಿಳೆಯರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಫ್ರಾನ್ಸೆಸ್ಕಾ ಹೇಳಿದ್ದಾರೆ. ಜೈಲಿನಲ್ಲಿಯೂ ಸಹ, ಈ ಕೈದಿಗಳಿಗೆ ಮಾದಕ ದ್ರವ್ಯಗಳನ್ನು ನೀಡಲಾಗುತ್ತಿತ್ತು. ಬಳಿಕ ಅವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತು ಎಂದಿದ್ದಾರೆ.

ಮತ್ತಷ್ಟು ಓದಿ: ಪುಣೆ ಅತ್ಯಾಚಾರ ಪ್ರಕರಣ, ಮಹಿಳೆ ‘ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು’ ಆರೋಪಿ ಪರ ವಕೀಲರ ಮೊಂಡು ವಾದ

ಈ ಮಾದಕ ವ್ಯಸನಿ ಮಹಿಳೆಯರು ಮಾದಕ ದ್ರವ್ಯಗಳಿಗಾಗಿ ಜೈಲರ್‌ಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಜೈಲರ್‌ಗಳು ಇದರ ಲಾಭ ಪಡೆದರು. ಮಹಿಳಾ ಕೈದಿಗಳು ಮತ್ತು ಜೈಲರ್‌ಗಳ ನಡುವೆ ಅವರಿಗೆ ಮಾದಕ ದ್ರವ್ಯಗಳನ್ನು ನೀಡಲಾಗುವುದು ಎಂದು ಒಪ್ಪಂದವಿತ್ತು ಅದಕ್ಕೆ ಬದಲಾಗಿ ಅವರ ಜತೆ ಮಲಗಬೇಕಿತ್ತು.

ಮಾದಕದ್ರವ್ಯ ಕೊಡುವುದಾಗಿ ಜೈಲರ್​ಗಳು ಒಪ್ಪಿಕೊಂಡಿದ್ದಕ್ಕೆ ಇವರೂ ಕೂಡ ಅವರೊಂದಿಗೆ ಇರಲು ಒಪ್ಪಿಕೊಂಡಿದ್ದರು. ಆ ಜೈಲಿನಲ್ಲಿ ಅತ್ಯಾಚಾರಕ್ಕೊಳಗಾಗದ ಯಾವುದೇ ಮಹಿಳೆ ಇರಲಿಲ್ಲ ಎಂದು ಫ್ರಾನ್ಸೆಸ್ಕಾ ಉಲ್ಲೇಖಿಸಿದ್ದಾರೆ. ಜೈಲಿನಲ್ಲಿರುವ ಜೈಲರ್ ಈ ಕೈದಿಗಳಿಗೆ ಬೆದರಿಕೆ ಹಾಕುತ್ತಿದ್ದರು, ಈ ವಿಷಯಗಳಲ್ಲಿ ಯಾವುದಾದರೂ ಜೈಲಿನ ಹೊರಗೆ ಹೋದರೆ ಜೀವಂತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ