AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ ಅತ್ಯಾಚಾರ ಪ್ರಕರಣ, ಮಹಿಳೆ ‘ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು’ ಆರೋಪಿ ಪರ ವಕೀಲರ ಮೊಂಡು ವಾದ

ಪುಣೆಯ ಸ್ವರ್ಗೇಟ್​ ಬಳಿಯ ಬಸ್​ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಪಿ ಪರ ವಕೀಲ ಮಹಿಳೆ ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು ಎಂದು ಮೊಂಡು ವಾದ ಮಾಡಿದ್ದಾರೆ. ಆರೋಪಿ ದತ್ತಾತ್ರೇಯ ರಾಮದಾಸ್ ಗಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಲವಂತವಾಗಿ ಏನೂ ಆಗಿಲ್ಲ, ಆಕೆ ಕೂಗಿಕೊಂಡು ಸಹಾಯ ಕೋರಬಹುದಿತ್ತು ಎಂದು ವಕೀಲ ವಾಜಿದ್ ಖಾನ್ ಹೇಳಿದ್ದಾರೆ.

ಪುಣೆ ಅತ್ಯಾಚಾರ ಪ್ರಕರಣ, ಮಹಿಳೆ ‘ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು’ ಆರೋಪಿ ಪರ ವಕೀಲರ ಮೊಂಡು ವಾದ
ಆರೋಪಿImage Credit source: Mint
ನಯನಾ ರಾಜೀವ್
|

Updated on: Mar 01, 2025 | 10:55 AM

Share

ಪುಣೆ, ಮಾರ್ಚ್​ 1: ಪುಣೆಯ ಸ್ವರ್ಗೇಟ್​ ಬಳಿಯ ಬಸ್​ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಪಿ ಪರ ವಕೀಲ ಮಹಿಳೆ ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು ಎಂದು ಮೊಂಡು ವಾದ ಮಾಡಿದ್ದಾರೆ. ಆರೋಪಿ ದತ್ತಾತ್ರೇಯ ರಾಮದಾಸ್ ಗಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಲವಂತವಾಗಿ ಏನೂ ಆಗಿಲ್ಲ, ಆಕೆ ಕೂಗಿಕೊಂಡು ಸಹಾಯ ಕೋರಬಹುದಿತ್ತು ಎಂದು ವಕೀಲ ವಾಜಿದ್ ಖಾನ್ ಹೇಳಿದ್ದಾರೆ.

ಏನೇ ನಡೆದಿದ್ದರೂ ಅದು ಇಬ್ಬರ ನಡುವಿನ ಒಪ್ಪಿಗೆಯ ನಂತರವೇ ಸಂಭವಿಸಿದೆ, ಪುಣೆ ಪೊಲೀಸರು ಗಡೆಯನ್ನು ಬಂಧಿಸಲು ಶಿರೂರ್ ತಹಸಿಲ್‌ನಲ್ಲಿ ಡ್ರೋನ್‌ಗಳು ಮತ್ತು ಶ್ವಾನ ದಳಗಳನ್ನು ನಿಯೋಜಿಸಿದ್ದರು. ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಶಿವ ಶಾಹಿ ಬಸ್ಸಿನೊಳಗೆ ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ . ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ನೀಡುವುದಾಗಿ ಈಗಾಗಲೇ ಪೊಲೀಸರು ತಿಳಿಸಿದ್ದರು.

ಬೆಳಗ್ಗೆ 5.45 ರ ಸುಮಾರಿಗೆ ಪಕ್ಕದ ಸತಾರ ಜಿಲ್ಲೆಯ ಫಾಲ್ಟನ್‌ಗೆ ಹೋಗುವ ಬಸ್‌ಗಾಗಿ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಹತ್ತಿರ ಬಂದು ಅವಳನ್ನು ಅಕ್ಕಾ ಎಂದು ಕರೆದು ಮಾತನಾಡಲು ಶುರು ಮಾಡಿದ್ದ, ಸತಾರಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದ, ವಿಶಾಲವಾದ ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಖಾಲಿ ಶಿವ ಶಾಹಿ ಎಸಿ ಬಸ್‌ಗೆ ಅವಳನ್ನು ಕರೆದೊಯ್ದಿದ್ದಾನೆ.

ಮತ್ತಷ್ಟು ಓದಿ: ಪುಣೆ: ನಾನು ದೊಡ್ಡ ತಪ್ಪು ಮಾಡಿದ್ದೇನೆ, ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪಿ ದತ್ತಾತ್ರೇಯ ಹೇಳಿದ್ದೇನು?

ಬಸ್ಸಿನೊಳಗೆ ಲೈಟ್ ಇಲ್ಲದ ಕಾರಣ ಆಕೆ ಹಿಂಜರಿಕೆಯಿಂದಲೇ ಬಸ್​ ಹತ್ತಿದ್ದಳು. ಆಕೆ ವಿಚಾರ ತಿಳಿದು ಓಡಿ ಹೋಗಲು ಪ್ರಯತ್ನಿಸುವ ಮುನ್ನವೇ ಅತ್ಯಾಚಾರವೆಸಗಿದ್ದಾನೆ. ಆರೋಪಿಯು ಮಹಿಳೆಗೆ ತಾನು ಫಾಲ್ಟನ್ ಬಸ್‌ನ ಕಂಡಕ್ಟರ್ ಎಂದು ಹೇಳಿದ್ದಾನೆ, ಆದ್ದರಿಂದ ಆಕೆ ಅವನನ್ನು ನಂಬಿ ಅವನೊಂದಿಗೆ ಹೋಗಿದ್ದಳು.

ಫೆಬ್ರವರಿ 25 ರಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿಯನ್ನು ಪುಣೆ ಪೊಲೀಸರು ಈಗ ಬಂಧಿಸಿದ್ದಾರೆ; ಪುಣೆಯ ಶಿರೂರ್ ತಹಸಿಲ್‌ನ ಹಳ್ಳಿಯೊಂದರಲ್ಲಿ ಮಧ್ಯರಾತ್ರಿಯ ಸುಮಾರಿಗೆ ಬಂಧನ ನಡೆದಿದೆ. ರಾಮದಾಸ್ ಗಡೆ ಶಿರೂರ್‌ನ ಜಮೀನಿನಲ್ಲಿ ಅಡಗಿಕೊಂಡಿರುವುದು ಕಂಡುಬಂದಿತ್ತು. ತಡರಾತ್ರಿ, ಅವರು ಯಾರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದರು, ಮತ್ತು ಆ ವ್ಯಕ್ತಿಯು ತಕ್ಷಣ ಪೊಲೀಸರನ್ನು ಸಂಪರ್ಕಿಸಿದರು, ಇದು ಅಂತಿಮವಾಗಿ ಅವರ ಬಂಧನ ನಡೆಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ