Uttarakhand Snowfall: ಹಿಮಾಲಯದ ಸುತ್ತ ಭಾರೀ ಹಿಮಪಾತ; ಹಿಮದ ಮಳೆಗೆ ಸಿಕ್ಕ ಪ್ರವಾಸಿಗರು
ಉತ್ತರಾಖಂಡದ ಪಿಥೋರಗಢ, ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿಯಲ್ಲಿ ಹಿಮಪಾತವಾಗಿದೆ. ಹಿಮಾಲಯ ಪ್ರದೇಶದ ಗುಡ್ಡಗಾಡಿನಲ್ಲಿ ಹಿಮಪಾತವಾಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಉತ್ತರಾಖಂಡ: ನಿನ್ನೆಯಿಂದ ಉತ್ತರಾಖಂಡದ (Uttarakhand Snowfall) ಸುತ್ತಮುತ್ತ ಭಾರೀ ಹಿಮಪಾತವಾಗುತ್ತಿದೆ. ಎತ್ತರದ ಹಿಮಾಲಯದ ಪ್ರದೇಶಗಳು ಹಿಮದಿಂದ ಆವೃತವಾಗಿದ್ದು, ತಾಪಮಾನದಲ್ಲಿ ಭಾರೀ ಕುಸಿತವಾಗಿರುವುದರಿಂದ ಶೀತ ವಾತಾವರಣ ಸೃಷ್ಟಿಯಾಗಿದೆ. ಉತ್ತರಾಖಂಡದ ಪಿಥೋರಗಢ, ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿಯಲ್ಲಿ ಹಿಮಪಾತವಾಗಿದೆ. ನವೆಂಬರ್ 7ರಿಂದ ಉತ್ತರಾಖಂಡದ ಪಿಥೋರಗಢ, ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಬಾಗೇಶ್ವರ ಜಿಲ್ಲೆಗಳಲ್ಲಿ ಹಿಮಪಾತವಾಗುವ ನಿರೀಕ್ಷೆಯಿದೆ. ಉತ್ತರಾಖಂಡದ ಧರ್ಚುಲಾ, ದಾತು, ಪಚ್ಚೌಲಿ, ದುಗಾಟು ಹಾಗೂ ದರ್ಮಾ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮ ಮಳೆಯಂತೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Published on: Nov 03, 2022 10:08 AM