ದಿಶಾ ಸಮಿತಿ ಸಭೆಯಲ್ಲಿ ‘ವಂದೇ ಮಾತರಂ’ ಜಟಾಪಟಿ: ಪೂರ್ತಿ ಚರಣ ಹಾಡುವಂತೆ ಸಂಸದ ಕಾಗೇರಿ ಪಟ್ಟು
ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟಸ ದಿಶಾ ಸಮಿತಿ ಸಭೆಯಲ್ಲಿ ವಂದೇ ಮಾತರಂ ಗೀತೆ ವಿಚಾರವಾಗಿ ಜಟಾಪಟಿ ನಡೆದಿದೆ. ಎರಡು ಚರಣ ಮಾತ್ರ ಪ್ಲೇ ಆಗುತ್ತಿದ್ದಂತೆ, ಪೂರ್ತಿ ಚರಣ ಹಾಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಟ್ಟು ಹಿಡಿದ ಪ್ರಸಂಗ ನಡೆದಿದೆ. ಹಾಡು ನಿಲ್ಲುತ್ತಿದ್ದಂತೆ ಮುಂದಿನ ಚರಣ ಹಾಡಲು ಅವರು ಮುಂದಾಗಿದ್ದು, ಅದಕ್ಕೆ ದಿಶಾ ಸಭೆಯ ನಾಮನಿರ್ದೇಶಿತ ಸದಸ್ಯರೂ ಧ್ವನಿಗೂಡಿಸಿದ್ದಾರೆ.
ಉತ್ತರ ಕನ್ನಡ, ನವೆಂಬರ್ 25: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆ ವೇಳೆ ವಂದೇ ಮಾತರಂ ಗೀತೆಯ ಜಟಾಪಟಿ ನಡೆದಿದೆ. ವಂದೇ ಮಾತರಂ ಗೀತೆಯ ಪೂರ್ತಿ ಚರಣ ಹಾಡುವಂತೆ ಸಂಸದ ಕಾಗೇರಿ ಒತ್ತಾಯಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಜೊತೆ ಅವರು ಚರ್ಚೆ ನಡೆಸಿದ್ದರು. ಆ ಬಳಿಕವೂ ಸಭೆಯಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಪ್ಲೇ ಆಗಿದ್ದು, ಹಾಡು ನಿಲ್ಲುತ್ತಿದ್ದಂತೆ ಮುಂದಿನ ಚರಣ ಹಾಡಲು ಸಂಸದ ಕಾಗೇರಿ ಮುಂದಾಗಿದ್ದಾರೆ. ಅದಕ್ಕೆ ದಿಶಾ ಸಭೆಯ ನಾಮನಿರ್ದೇಶಿತ ಸದಸ್ಯರೂ ಧ್ವನಿಗೂಡಿಸಿದ ಪ್ರಸಂಗ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
