ಶೂಟಿಂಗ್ ಇಲ್ಲದಿದ್ದರೂ ಹರಿಪ್ರಿಯಾರನ್ನು ನೋಡಲು ಸೆಟ್​ಗೆ ಹೋಗ್ತಿದ್ದೆ: ವಸಿಷ್ಠ ಸಿಂಹ

|

Updated on: May 23, 2023 | 10:42 PM

Vasishta Simha-Hripriya: ಹರಿಪ್ರಿಯಾ. ವಸಿಷ್ಠ ಸಿಂಹ ನಟಿಸಿರುವ ಯದಾ ಯದಾ ಹಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಹಾಗೂ ಹರಿಪ್ರಿಯಾರ ಪ್ರೀತಿಯ ಬಗ್ಗೆ ವಸಿಷ್ಠ ಸಿಂಹ ಮಾತನಾಡಿದ್ದಾರೆ.

ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha) ಮದುವೆ ಆಗುವ ಮುನ್ನ ಪ್ರೇಮಿಗಳಾಗಿದ್ದಾಗ ಯದಾ ಯದಾ ಹಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಸಿನಿಮಾದ ಶೂಟಿಂಗ್ ವೇಳೆ ತಮ್ಮ ಪಾತ್ರದ ಶೂಟಿಂಗ್ ಇಲ್ಲದಿದ್ದರೂ ಹರಿಪ್ರಿಯಾರನ್ನು ನೋಡಲು ಸೆಟ್​ಗೆ ಹೋಗುತ್ತಿದ್ದ ವಿಷಯವನ್ನು ವಸಿಷ್ಠ ಸಿಂಹ ಹೇಳಿಕೊಂಡಿದ್ದಾರೆ. ಯದಾ ಯದಾ ಹಿ ಸಿನಿಮಾದಲ್ಲಿ ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ದಿಗಂತ್ ಮಂಚಾಲೆ ನಟಿಸಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ