ಕ್ಯಾಮೆರಾ ಮುಂದೆ, ಹಿಂದೆ ಎರಡೂ ಕಡೆ ನಟಿಸುತ್ತಿದ್ವಿ: ಹರಿಪ್ರಿಯಾ ಜೊತೆಗಿನ ಲವ್ ಸ್ಟೋರಿ ಬಗ್ಗೆ ವಸಿಷ್ಠ ಮಾತು
Vasishta Simha-Haripriya: ಪ್ರೇಮಿಸಿ ವಿವಾಹವಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹವಾದ ಬಳಿಕ ಇದೇ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದಾರೆ. ಆದರೆ ಮದುವೆಗೆ ಮುಂಚೆ ಒಟ್ಟಿಗೆ ನಟಿಸುವಾಗ ತಮಗೆ ಎಷ್ಟು ಕಷ್ಟವಾಗುತ್ತಿತ್ತು ಎಂದು ವಸಿಷ್ಠ ಹೇಳಿಕೊಂಡಿದ್ದಾರೆ.
ನಟಿ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha) ಇಬ್ಬರೂ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಇಬ್ಬರೂ ಸ್ವತಃ ತಾವಾಗಿಯೇ ಘೋಷಿಸುವ ವರೆಗೆ ಬಹಳಷ್ಟು ಜನರಿಗೆ ಇವರ ಪ್ರೇಮಕಹಾನಿ ಗೊತ್ತೆ ಆಗಿರಲಿಲ್ಲ. ಮದುವೆ ಆದ ಬಳಿಕ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಒಟ್ಟಿಗೆ ಯದಾ ಯದಾ ಹಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಸಿಷ್ಠ ಸಿಂಹ, ಈ ಸಿನಿಮಾದ ನಿರ್ದೇಶಕರನ್ನು ಬಹಳ ಹಿಂದೆ ಹರಿಪ್ರಿಯಾ ಅವರೇ ರೆಕೆಮೆಂಡ್ ಮಾಡಿದ್ದರು ಎಂದರು. ಜೊತೆಗೆ ಮದುವೆಗೆ ಮುಂಚೆ ತಾವಿಬ್ಬರೂ ಒಟ್ಟಿಗೆ ನಟಿಸುವಾಗ, ಸೆಟ್ನಲ್ಲಿ ತಾವು ಪ್ರೇಮಿಗಳು ಎಂದು ತೋರಿಸಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು, ಹೇಗೆ ಅದನ್ನು ಮೇಂಟೇನ್ ಮಾಡುತ್ತಿದ್ದೆವು ಎಂಬುದನ್ನೂ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ