ವಿಡಿಯೋ: ವಾಹನ ಚಾಲಕನ ಅಜಾಗರೂಕತೆ -ಅಪಾಯದ ಅರಿವಿದ್ದರೂ ಪೆಟ್ರೋಲ್​​ ಬಂಕ್​​ನಲ್ಲಿಯೇ ನಿದ್ರಿಸಿದವ ಚಿರನಿದ್ರೆಗೆ ಜಾರಿದ

ವಿಡಿಯೋ: ವಾಹನ ಚಾಲಕನ ಅಜಾಗರೂಕತೆ -ಅಪಾಯದ ಅರಿವಿದ್ದರೂ ಪೆಟ್ರೋಲ್​​ ಬಂಕ್​​ನಲ್ಲಿಯೇ ನಿದ್ರಿಸಿದವ ಚಿರನಿದ್ರೆಗೆ ಜಾರಿದ

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on: Nov 25, 2023 | 10:13 AM

ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪ ನಿವಾಸಿ, ತೀರ್ಥಹಳ್ಳಿಯಿಂದ ಉಡುಪಿಗೆ ಹೊರಟವರು ಸೋಮೇಶ್ವರ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ವಿರಮಿಸಿದ್ದಾರೆ. ತಮ್ಮ ಏಸ್ ಗಾಡಿಯಲ್ಲಿರುವ ಬಾಳೆಗೊನೆಯ ಲೋಡ್ ಜೊತೆಗೆ ರಾತ್ರಿ ಸಂಚಾರ ಬೇಡ ಎನ್ನುವ ಉದ್ದೇಶಕ್ಕೆ ಪೆಟ್ರೋಲ್ ಬಂಕ್ ನಲ್ಲಿ ಗಾಡಿ ಸೈಡ್ ಹಾಕಿ ಮಲಗಿದ್ದೇ ಪ್ರಾಣ ಹಾರಿಹೋಗಲು ಕಾರಣವಾಗಿದೆ.

ಮುಂಜಾನೆ ಬಾಳೆ ಗೊನೆ ವ್ಯಾಪಾರದ ಕನಸಿನಲ್ಲಿ ಮಲಗಿದ್ದ ಕಾರ್ಮಿಕ ಆ ದಿನದ ಬೆಳಕನ್ನು ನೋಡಲೇ ಇಲ್ಲ. ರಾತ್ರಿ ವೇಳೆ ಲೋಡ್ ಇರುವ ಗಾಡಿಯಲ್ಲಿ ಸಂಚರಿಸುವುದು ಅಪಾಯಕಾರಿ ಎಂದು ವಿರಮಿಸಿದವರ ಮೇಲೆ ಯಮ ಕಿಂಕರನ ಸವಾರಿಯಾಗಿದೆ. ನೋಡು ನೋಡುತ್ತಿದ್ದ ರಕ್ತದ ಮಡುವಿನಲ್ಲಿ ಬಿದ್ದು ತನ್ನ ಸಹಕಾರ್ಮಿಕನ (Labourer) ಕಣ್ಣು ಮುಂದೆ ಪ್ರಾಣ ಬಿಟ್ಟಿದ್ದಾನೆ ಶಿವರಾಜ್. ಹೌದು ಆ ಸಿಸಿ ಕ್ಯಾಮೆರಾ ಫೋಟೇಜ್ ನೋಡಿದರೆ ಎಂಥವರಿಗೇ ಆಗಲಿ ಮೈ ಜುಮ್ ಅನ್ನಿಸುವುದು ಸಹಜ. ಶಿವಮೊಗ್ಗ (Shivamogga) ಜಿಲ್ಲೆಯಿಂದ ಬಾಳೆಗೊನೆಯನ್ನು ಹೊತ್ತು ಏಸ್ ಗಾಡಿಯಲ್ಲಿ ಉಡುಪಿಗೆ ಹೊರಟಿದ್ದವರು ರಾತ್ರಿಯ ಸಂಚಾರ ಬೇಡ ಎಂದು ಆಗುಂಬೆ ಸಮೀಪದ ಸೊಮೇಶ್ವರ ಪೆಟ್ರೋಲ್ ಬಂಕ್ ನಲ್ಲಿ ವಿರಮಿಸಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಯಮದೂತನಂತೆ ಬಂದ ಟಿಪ್ಪರ್ ಗಾಡಿಯವ, ಬಂಕ್ ನಲ್ಲಿ ಡಿಸೇಲ್ ಹಾಕಿಸಿಕೊಂಡು ಉಡುಪಿಯತ್ತ ತೆರಳುವಾಗ, ಬಂಕ್ ಪಕ್ಕದಲ್ಲಿಯೇ ಮಲಗಿದ್ದ ಲಾರಿ ಕಾರ್ಮಿಕನ ಮೇಲೆ ಟಿಪ್ಪರ್ ಚಲಾಯಿಸಿದ್ದಾನೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ಸೋಮೆಶ್ವರದ ಪೆಟ್ರೋಲ್ ಬಂಕ್ (petrol bunk) ನಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಕಾರ್ಮಿಕ ಶಿವರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಿಸಿ ಕ್ಯಾಮೆರಾ (CCTV) ದೃಶ್ಯ ಭಯ ಹುಟ್ಟಿಸುವಂತಿದೆ.

ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪ ನಿವಾಸಿ, ತೀರ್ಥಹಳ್ಳಿಯಿಂದ ಉಡುಪಿಗೆ ಹೊರಟವರು ಸೋಮೇಶ್ವರ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ವಿರಮಿಸಿದ್ದಾರೆ. ತಮ್ಮ ಏಸ್ ಗಾಡಿಯಲ್ಲಿರುವ ಬಾಳೆಗೊನೆಯ ಲೋಡ್ ಜೊತೆಗೆ ರಾತ್ರಿ ಸಂಚಾರ ಬೇಡ ಎನ್ನುವ ಉದ್ದೇಶಕ್ಕೆ ಪೆಟ್ರೋಲ್ ಬಂಕ್ ನಲ್ಲಿ ಗಾಡಿ ಸೈಡ್ ಹಾಕಿ ಮಲಗಿದ್ದೇ ಪ್ರಾಣ ಹಾರಿಹೋಗಲು ಕಾರಣವಾಗಿದೆ.

ಉಡುಪಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಚಾಲಕನು ಬಂಕ್ ನಲ್ಲಿ ಇಂಧನ ತುಂಬಿಸಿಕೊಂಡ ಬಳಿಕ ಮುಂಜಾನೆಯ ಮಂಜು ಮತ್ತು ಕತ್ತಲೆ ಹಿನ್ನೆಲೆಯಲ್ಲಿ ಮಲಗಿದ್ದವರನ್ನು ಗಮನಿಸದೇ ಟಿಪ್ಪರ್ ಹತ್ತಿಸಿದ್ದಾನೆ ಎನ್ನಲಾಗಿದೆ. ಇನ್ನು ಘಟನೆ ನಡೆದ ಬಳಿಕ ಸೋಮೇಶ್ವರದದಲ್ಲಿ ಹಾಕಲಾಗಿರುವ ಪೊಲೀಸ್ ಚೆಕ್ಪೋಸ್ಟ್ ಬಳಿ ಟಿಪ್ಪರ್ ಹಾಗೂ ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಒಟ್ಟಾರೆಯಾಗಿ ಅಜಾಗರೂಕವಾಗಿ ವಾಹನ ಚಾಲನೆ ಮತ್ತು ಅಪಾಯದ ಅರಿವಿದ್ದರೂ ಬಂಕ್ ಪಕ್ಕದಲ್ಲಿಯೇ ವಿರಮಿಸಿರುವುದು ಒಂದು ಸಾವಿಗೆ ಕಾರಣವಾಗಿದೆ. ಉಡುಪಿಗೆ ಬರಬೇಕಾಗಿದ್ದ ಬಾಳೆಗೊನೆ ತುಂಬಿದ ಏಸ್ ಗಾಡಿ ಸೋಮೇಶ್ವರದಲ್ಲಿ ವಿಶ್ರಾಂತಿಗಾಗಿ ನಿಲ್ಲಿಸಿರುವುದರಿಂದ ಶಿವರಾಜ್ ಪ್ರಾಣ ಹಾರಿಹೋಗುವಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ