ಅನುಮತಿ ಪಡೆಯದೆ ಪ್ರತಿಭಟನೆಗಿಳಿದ ಬೇಡ ಜಂಗಮ ಸಮುದಾಯದವರನ್ನು ಹೊತ್ತು ತರುತ್ತಿದ್ದ ವಾಹನಗಳನ್ನು ಪೊಲೀಸರು ತಡೆದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 30, 2022 | 3:01 PM

ಅನುಮತಿ ತೆಗೆದುಕೊಂಡಿರದ ಕಾರಣ ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಪ್ರತಿಭಟನೆಕಾರರನ್ನು ತುಮಕೂರು ಹೆದ್ದಾರಿಯ ಟೋಲ್ ಗೇಟ್ ಗಳ ಬಳಿ ತಡೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮೀಶನರ್ ಸಿಹೆಚ್ ಪ್ರತಾಪ್ ರೆಡ್ಡಿ ಅವರು ಹಿರೇಮಠ ಅವರೊಂದಿಗೆ ಫೋನ್ ಮೂಲಕ ಮಾತಾಡಿದರು

ಬೆಂಗಳೂರು: ಮೀಸಲಾತಿಯಲ್ಲಿ ಹೆಚ್ಚಳ ಆಗ್ರಹಿಸಿ ಬೇಡ ಜಂಗಮ ಸಮುದಾಯದವರು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ (Freedom Park) ಬಿಡಿ ಹಿರೇಮಠ್ (BD Hiremath) ಅವರ ನಾಯಕತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಆದರೆ ಪ್ರತಿಭಟನೆ ನಡೆಸಲು ಸಮುದಾಯದವರು ಅನುಮತಿ ತೆಗೆದುಕೊಂಡಿರದ ಕಾರಣ ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಪ್ರತಿಭಟನೆಕಾರರನ್ನು ತುಮಕೂರು ಹೆದ್ದಾರಿಯ ಟೋಲ್ ಗೇಟ್ ಗಳ ಬಳಿ ತಡೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮೀಶನರ್ ಸಿಹೆಚ್ ಪ್ರತಾಪ್ ರೆಡ್ಡಿ (CH Pratap Reddy) ಅವರು ಹಿರೇಮಠ ಅವರೊಂದಿಗೆ ಫೋನ ಮೂಲಕ ಮಾತಾಡಿದರು. ಅವರ ನಡುವಿನ ಮಾತುಕತೆಯ ವಿವರ ನಮಗೆ ಲಭ್ಯವಾಗಿಲ್ಲ.

ಇದನ್ನೂಓದಿ:  Hasan Ali: ಔಟ್ ಕೊಟ್ಟಿಲ್ಲವೆಂದು ಅಂಪೈರ್ ಕೈಯನ್ನು ಬಲವಂತವಾಗಿ ಎತ್ತಿದ ಪಾಕ್ ಕ್ರಿಕೆಟಿಗ: ವಿಡಿಯೋ