Satish Kaushik remembered: ಅತ್ಯಂತ ಅರ್ಥಪೂರ್ಣವಾಗಿ ಸತೀಶ್ ಕೌಶಿಕ್ರ 67ನೇ ಜನ್ಮ ವಾರ್ಷಿಕೋತ್ಸವ ಆಯೋಜಿಸಿದ ಆಪ್ತಮಿತ್ರ ಅನುಪಮ್ ಖೇರ್
ತಾನು ಅಂಕಲ್ ಎಂದು ಸಂಬೋಧಿಸುತ್ತಿದ್ದ ಸತೀಶ್ ಅವರ ಜನ್ಮ ವಾರ್ಷಿಕೋತ್ಸವವನ್ನು ಅಮೋಘವಾಗಿ ಆಯೋಜಿಸಿದ ಅವರ ಪರಮ ಮಿತ್ರ ಅನಪಮ್ ಖೇರ್ ಗೆ ನಟ-ರಾಜಕಾರಣಿ ರಾಜ್ ಬಬ್ಬರ್ ಮಗಳು ಜೂಹಿ ಬಬ್ಬರ್ ಧನ್ಯವಾದ ಸಲ್ಲಿಸಿದರು.
ಮುಂಬೈ: ಇತ್ತೀಚಿಗೆ ನಿಧನರಾದ ನಟ, ನಿರ್ದೇಶ ಸತೀಶ್ ಕೌಶಿಕ್ (Satish Kaushik) ಅವರ 67 ನೇ ಜನ್ಮ ವಾರ್ಷಿಕೋತ್ಸವನ್ನು ಅವರ ಆಪ್ತಮಿತ್ರ ಅನುಪಮ್ ಖೇರ್ (Anupam Kher) ಮುಂಬೈನ ವಿಖ್ಯಾತ ಇಸ್ಕಾನ್ ಪ್ರಾರ್ಥನಾ ಮಂದಿರದಲ್ಲಿ (ISKCON Prayer Hall) ಅದ್ಭುತವಾಗಿ ಆಯೋಜಿಸಿದರು. ಎಂಥದ್ದೇ ಸಂಕಷ್ಟ ಎದುರಾದರೂ ಮುಗುಳ್ನಗುತ್ತಿದ್ದ ಕೌಶಿಕ್ ಅವರ ಸ್ವಭಾವನ್ನು ಅನುಪಮ್ ಖೇರ್ ಕೊಂಡಾಡಿದರು.
‘ಅವನ ಮಿಲಿಯನ್ಗಟ್ಟಲೆ ನೆನಪುಗಳು ನನ್ನಲ್ಲಿವೆ. ಇಡೀ ಒಂದು ದಿನಕ್ಕಾಗುವಷ್ಟು ಸರಕನ್ನು ನಿಮಗೆ ಒದಗಿಸಬಲ್ಲೆ. ಯಾವುದಾದರೂ ಒಂದು ನೆನಪಿನ ಬಗ್ಗೆ ಮಾತಾಡುವುದು ಸುಲಭ ಸಾಧ್ಯವಲ್ಲ. ಆದರೆ ಅವನ ಯಾವತ್ತೂ ಮಾಸದ ಮುಗುಳ್ನಗೆಯನ್ನು ಯಾವತ್ತೂ ಮರೆಯಲಾಗದು. ಒತ್ತಡದಲ್ಲಿರಲಿ, ಕೋಪದಲ್ಲಿರಲಿ, ಅಥವಾ ಸಂತೋಷದಲ್ಲಿರಲಿ-ಮುಗುಳುನಗು ಅವನ ಮುಖದಲ್ಲಿ ಮನೆಮಾಡಿಕೊಂಡಿರುತಿತ್ತು,’ ಎಂದು ಅನುಪಮ್ ಖೇರ್ ಹೇಳುತ್ತಾರೆ.
ಇದನ್ನೂ ಓದಿ: ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಶಿಕ್ಷೆಗೆ ಮಧ್ಯಂತರ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ಖ್ಯಾತ ಗಾಯಕ ಶಂಕರ್ ಮಹದೇವನ್ ಇತ್ತೀಚಿಗೆ ರಿಯಾಲಿಟಿ ಶೋವೊಂದರಲ್ಲಿ ಸತೀಶ್ ಕೌಶಿಕ್ ಅವರೊಂದಿಗೆ ಸಂವಾದ ನಡೆಸಿದ್ದನ್ನು ಜ್ಞಾಪಿಸಿಕೊಂಡರು.
‘ಸಾ ರೆ ಗಾ ಮಾ ಪಾ ಕಾರ್ಯಕ್ರಮದಲ್ಲಿ ನಾನು ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಸತೀಶ್ ಅತಿಥಿಯಾಗಿ ಅಗಮಿಸಿದ್ದರು. ಅವರು ಸಿನಿಮಾಗಳಲ್ಲಿ ಮಾಡಿರುವ ಕೆಲಸ ಸೇರಿದಂತೆ ನಾವು ಹಲವಾರು ವಿಷಯಗಳನ್ನು ಮಾತಾಡಿದೆವು. ಅವರನ್ನು ನಾವು ತುಂಬಾ ಪ್ರೀತಿಸುತ್ತಿದ್ದೆವು ಮತ್ತು ಅದಕ್ಕೆ ಪ್ರತಿಯಾಗಿ ಅವರು ನಮಗೆ ಗೌರವಾದರಗಳನ್ನು ನೀಡುತ್ತಿದ್ದರು. ಅವರೊಬ್ಬ ಅಸಾಮಾನ್ಯ ವ್ಯಕ್ತಿಯಾಗಿದ್ದರು,’ ಎಂದು ಶಂಕರ್ ಮಹಾದೇವನ್, ಹೇಳುತ್ತಾರೆ
ಸತೀಶ್ ಜೊತೆ ಹಲವಾರು ವರ್ಷಗಳ ಸ್ನೇಹ ಹೊಂದಿದ್ದ ರಾಕೇಶ್ ಬೇಡಿ ಅವರೊಂದಿಗೆ ಕಳೆದ ದಿನಗಳ ಬಗ್ಗೆ ಹೇಳುತ್ತಾ ಅವರ ವಿನೋದಮಯ ಪ್ರವೃತ್ತಿಯನ್ನು ಮೆಲುಕು ಹಾಕಿದರು.
‘ಮನಸ್ಸಿಗೆ ಮುದ ನೀಡುವ ಅವನ ನೂರೆಂಟು ನೆನಪುಗಳು ನನ್ನಲ್ಲಿವೆ, ಅವನು ಸದಾ ನಗುತ್ತಿದ್ದ ಮತ್ತು ನಕ್ಕಾಗ ಅವನ ಇಡೀ ದೇಹ, ಕೆನ್ನೆ ಮತ್ತು ಹೊಟ್ಟೆ ರಭಸದಿಂದ ಅಲ್ಲಾಡುತ್ತಿದ್ದವು, ಅವನು ನಗುವುದನ್ನು ನೋಡಿಯೇ ನಮ್ಮಲ್ಲಿ ನಗು ಉಕ್ಕುತಿತ್ತು. ನಾವಿಬ್ಬರು ಜೊತೆಯಾಗಿ ಬಹಳ ಕೆಲಸ ಮಾಡಿದ್ದೇವೆ,’ ಎಂದು ರಾಕೇಶ್ ಬೇಡಿ ಹೇಳಿದರು.
ತಾನು ಅಂಕಲ್ ಎಂದು ಸಂಬೋಧಿಸುತ್ತಿದ್ದ ಸತೀಶ್ ಅವರ ಜನ್ಮ ವಾರ್ಷಿಕೋತ್ಸವವನ್ನು ಅಮೋಘವಾಗಿ ಆಯೋಜಿಸಿದ ಅವರ ಪರಮ ಮಿತ್ರ ಅನಪಮ್ ಖೇರ್ ಗೆ ನಟ-ರಾಜಕಾರಣಿ ರಾಜ್ ಬಬ್ಬರ್ ಮಗಳು ಜೂಹಿ ಬಬ್ಬರ್ ಧನ್ಯವಾದ ಸಲ್ಲಿಸಿದರು.
‘ತುಂಬು ಮನಸ್ಸಿನಿಂದ ನಾನು ಅನುಪಮ್ ಅಂಕಲ್ ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಯಾಕೆಂದರೆ ಸತೀಶ್ ಕೌಶಿಕ್ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಸೆಲಿಬ್ರೇಟ್ ಮಾಡುವ ಅವಶ್ಯಕತೆಯಿದೆ, ಅದಕ್ಕಾಗೇ ನಾವೆಲ್ಲ ಇಲ್ಲಿ ಸೇರಿದ್ದೇವೆ. ಮೀಡಿಯ ಪ್ರತಿನಿಧಿಗಳಿಗೂ ಧನ್ಯವಾದಗಳು,’ ಎಂದು ಜೂಹಿ ಬಬ್ಬರ್ ಹೇಳಿದರು.
ಇದನ್ನೂ ಓದಿ: ದೇಶವೊಂದೇ, ಎಲ್ಲಾ ರಾಜ್ಯದ ಸಂಸ್ಕೃತಿಯ ಅಪ್ಪಿಕೊಳ್ಳಬೇಕು-ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರ ಸಾರುತ್ತಿರುವ ಪ್ರಧಾನಿ ಮೋದಿ
ಸತೀಶ್ ಮತ್ತು ತನ್ನ ನಡುವೆ ಅಗಾಧವಾದ ವಯಸ್ಸಿನ ಅಂತರವಿದ್ದರೂ ಅವರೊಂದಿಗೆ ಹೇಗೆ ಸ್ನೇಹ ಕುದುರಿತು ಅಂತ ಗಾಯಕ ಅರ್ಮಾನ್ ಮಲ್ಲಿಕ್ ವಿವರಿಸಿದರು.
‘ಒಂದೇ ಕಟ್ಟಡದಲ್ಲಿ ನಾವು ವಾಸವಾಗಿದ್ದೆವು ಮತ್ತು ಸಾಯಂಕಾಲದ ಹೊತ್ತು ಜೊತೆಯಾಗಿ ವಾಕ್ ಹೋಗುತ್ತಿದ್ದೆವು. ನಮ್ಮ ನಡುವೆ ಗಾಢವಾದ ಸ್ನೇಹವಿತ್ತು. ಅವರ ಬಗ್ಗೆ ಭೂತಕಾಲದಲ್ಲಿ ಮಾತಾಡಲು ಕಷ್ಟವಾಗುತ್ತಿದೆ. ಅವರ ಜನ್ಮದಿನದಂದು ಅವರ ಅದ್ವಿತೀಯ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುತ್ತಿದ್ದೇವೆ,’ ಎಂದು ಅರ್ಮಾನ್ ಹೇಳಿದರು.
ಮಾರ್ಚ್ 8 ರಂದು ಸತೀಶ್ ಕೌಶಿಕ್ ಹೃದಯಾಘಾತಕ್ಕೆ ಬಲಿಯಾದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ