AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್

ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್

ಮಂಜುನಾಥ ಸಿ.
|

Updated on:Sep 12, 2024 | 5:56 PM

Share

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್, ಆರಂಭದ ದಿನಗಳಲ್ಲಿ ನಕಲಿ ಪಶ್ಚಾತ್ತಾಪವನ್ನು ಕ್ಯಾಮೆರಾಗಳ ಮುಂದೆ, ಪೊಲೀಸರ ಮುಂದೆ ಪ್ರದರ್ಶಿಸಿದ್ದರು. ಆದರೆ ಈಗ ತಮ್ಮ ನಿಜವಾದ ದುರುಳತನವನ್ನು ಕ್ಯಾಮೆರಾಗಳ ಮುಂದೆ ತೋರಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡ ಇನ್ನಿತರರು ಬಂಧನವಾಗಿ ಮೂರು ತಿಂಗಳಾಗಿವೆ. ಪೊಲೀಸರು ಬಂಧಿಸಿದ ಆರಂಭದಲ್ಲಿ ನಕಲಿ ಪಶ್ಚಾತ್ತಾಪ ತೋರ್ಪಡಿಸಿದ್ದ ದರ್ಶನ್ ಈಗ ತಮ್ಮ ನಿಜ ವ್ಯಕ್ತಿತ್ವ ಪ್ರದರ್ಶಿಸುತ್ತಿದ್ದಾರೆ. ತಮ್ಮದು ಅದೆಂಥಹಾ ದುರುಳ ವ್ಯಕ್ತಿತ್ವ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲನ್ನು ಹಣದ ದರ್ಪ ಬಳಸಿ ರೆಸಾರ್ಟ್ ಮಾಡಿಕೊಂಡು ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿರುವ ದರ್ಶನ್, ಇಂದು ತಮ್ಮ ಸೆಲ್​ನಿಂದ ಸಂದರ್ಶಕರ ಕೊಠಡಿಗೆ ಬರುವಾಗ ಕ್ಯಾಮೆರಾಗಳನ್ನು ನೋಡಿ ಅಸಹ್ಯವಾಗಿ ಸಂಜ್ಞೆ ಮಾಡಿದ್ದಾರೆ. ಇಲ್ಲಿದೆ ಅದರ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 12, 2024 05:55 PM