ಉಡುಪಿಯಲ್ಲಿ ಶ್ರೀ ವೀರಭದ್ರ ಸ್ವಾಮಿ ಕೋಟೆರಾಯನ ವೇಷಧಾರಿಯು ದೈವ ಅವಾಹನೆಯಾಗಿ ಮಾಡಿದ ಆವೇಷದ ಕುಣಿತ ವೈರಲ್ ಆಗಿದೆ

ಉಡುಪಿಯಲ್ಲಿ ಶ್ರೀ ವೀರಭದ್ರ ಸ್ವಾಮಿ ಕೋಟೆರಾಯನ ವೇಷಧಾರಿಯು ದೈವ ಅವಾಹನೆಯಾಗಿ ಮಾಡಿದ ಆವೇಷದ ಕುಣಿತ ವೈರಲ್ ಆಗಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 28, 2022 | 4:16 PM

ಅಲ್ಲಿ ನೆರೆದವರು ಪಾತ್ರಧಾರಿಯನ್ನು ತಡೆಯುವ ಪ್ರಯತ್ನ ಮಾಡಿದರೂ ಅವರ ಆವೇಷ ನಿಲ್ಲಲಿಲ್ಲ. ಏನು ಮಾಡುವುದು ಅಂತ ತೋಚದ ಸ್ಥಿತಿ ನಿರ್ಮಾಣವಾಗಿದ್ದು ಸತ್ಯ. ಅಂತಿಮವಾಗಿ ಅಲ್ಲಿಯೇ ಇದ್ದ ಹಿರಿಯರೊಬ್ಬರ ಸಲಹೆ ಮೇರೆಗೆ ದೇವರ ತೀರ್ಥವನ್ನು ಅವರ ಮೇಲೆ ಪ್ರೋಕ್ಷಣೆ ಮಾಡಲಾಯಿತು.

ಕಳೆದ ಒಂಬತ್ತು ಶತಮಾನಗಳಿಂದ ರಾಜ್ಯ ಸಾಂಸ್ಕೃತಿಕ ಲೋಕದ (cultural world) ಅವಿಬಾಜ್ಯ ಮತ್ತು ಅತ್ಯಂತ ಜನಪ್ರಿಯ ಭಾಗವಾಗಿರುವ ಯಕ್ಷಗಾನ (Yakshagana) ಒಂದು ಶಾಸ್ತ್ರೀಯ ಕಲೆಯ ಜೊತೆ ಕರ್ನಾಟಕ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಜನರ ಮನರಂಜನೆ ಆಯಾಮವೂ ಹೌದು. ನಿಸ್ಸಂದೇಹವಾಗಿ ಯಕ್ಷಗಾನ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರಾವಳಿ ತೀರದ ಪ್ರದೇಶಗಳಲ್ಲಿ (coastal region) ಅನೇಕ ಯಕ್ಷಗಾನದ ತಂಡಗಳು ಸಿಗುತ್ತವೆ. ಯಕ್ಷಗಾನ ಆಟ ನಡೆಯುವಾಗ ಸೋಜಿಗ ಹುಟ್ಟಿಸುವ ಸಂಗತಿಗಳು ಸಂಭವಿಸುತ್ತವೆ. ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಯಕ್ಷಗಾನ ನಡೆಯುವಾಗ ಘಟಿಸಿದ ಸಂಗತಿಯೊಂದನ್ನು ಈ ವಿಡಿಯೋ ಮೂಲಕ ನಿಮಗೆ ತೋರಿಸುತ್ತಿದ್ದೇವೆ. ಇವರು ಶ್ರೀ ವೀರಭದ್ರ ಸ್ವಾಮಿ ಕೋಟೆರಾಯನ ವೇಷಧಾರಿ. ರಂಗ ಪ್ರವೇಶ ಮಾಡುತ್ತಿದ್ದಂತೆಯೇ ಈ ಕಲಾವಿದನಲ್ಲಿ ದೈವ ಆವಾಹನೆ ಆಯಿತು. ಹಾಗಾಗಿ ಅವರು ಸತತವಾಗಿ 10 ನಿಮಿಷ ಕಾಲ ಆವೇಶಭರಿತರಾಗಿಯೇ ಇದ್ದರು. ಅಲ್ಲಿ ನೆರೆದವರು ಪಾತ್ರಧಾರಿಯನ್ನು ತಡೆಯುವ ಪ್ರಯತ್ನ ಮಾಡಿದರೂ ಅವರ ಆವೇಷ ನಿಲ್ಲಲಿಲ್ಲ. ಏನು ಮಾಡುವುದು ಅಂತ ತೋಚದ ಸ್ಥಿತಿ ನಿರ್ಮಾಣವಾಗಿದ್ದು ಸತ್ಯ. ಅಂತಿಮವಾಗಿ ಅಲ್ಲಿಯೇ ಇದ್ದ ಹಿರಿಯರೊಬ್ಬರ ಸಲಹೆ ಮೇರೆಗೆ ದೇವರ ತೀರ್ಥವನ್ನು ಅವರ ಮೇಲೆ ಪ್ರೋಕ್ಷಣೆ ಮಾಡಲಾಯಿತು.

ಆಗಲೇ ಶ್ರೀ ವೀರಭದ್ರ ಸ್ವಾಮಿ ಕೋಟೆರಾಯನ ವೇಷಧಾರಿಯು ಸಹಜ ಸ್ಥಿತಿಗೆ ಬಂದಿದ್ದು. ಬಲ್ಲವರ ಪ್ರಕಾರ ಇಂಥ ಘಟನೆಗಳು ಯಕ್ಷಗಾನ ಆಟ ನಡೆಯುವಾಗ ಸಂಭವಿಸುತ್ತಿರುತ್ತವೆ. ಹೆಬ್ರಿಯಲ್ಲಿ ನಡೆದಿದ್ದು ಮೊದಲ ಸಂದರ್ಭವೇನೂ ಅಲ್ಲ.

ಅಂದಹಾಗೆ ಇಲ್ಲಿ ನಡೆಯುತ್ತಿದ್ದ ಯಕ್ಷಗಾನದ ಆಟ ಮಡಮಕ್ಕಿ ಕ್ಷೇತ್ರ ಮಹಾತ್ಮೆ. ಪ್ರದರ್ಶನ ನೀಡಿದ್ದು ಅದೇ ಮಡಮಕ್ಕಿ ಗ್ರಾಮದ ಮಡಮಕ್ಕಿ ಮೇಳ.

ಶ್ರೀ ವೀರಭದ್ರ ಸ್ವಾಮಿ ಕೋಟೆರಾಯನ ವೇಷಧಾರಿಯು ದೈವ ಅವಾಹನೆ ಆವೇಷದ ವಿಡಿಯೋ ವೈರಲ್ ಅಗಿದೆ.

ಇದನ್ನೂ ಓದಿ:   ಯಕ್ಷಗಾನ ಕಲಿಕೆಗೆ ಹೊರ ರಾಜ್ಯದಿಂದ ಆಗಮಿಸಿದ ತಾರಾ ಬಳಗ; ಕರಾವಳಿ ಕಲೆಗೆ ಮನಸೋತ ಹಿಂದಿ ಕಿರುತೆರೆ ಕಲಾವಿದರು