Video Story: ರಸ್ತೆಗುಂಡಿಗಳು ಬೆಂಗಳೂರು ರಸ್ತೆಗಳ ಶೋಭೆಯಾದರೆ ಹೈದರಾಬಾದ್​ನಲ್ಲಿ ರಸ್ತೆಗಳೇ ಕುಸಿದುಬಿಡುತ್ತವೆ!

Edited By:

Updated on: Dec 23, 2022 | 5:00 PM

ಹೈದರಾಬಾದ್ ಘೋಷ್ ಮಹಲ್ ವ್ಯಾಪ್ತಿಯ ಚಕ್ನಾವಾಡಿಯಲ್ಲಿ ಪೂರ್ತಿ ರಸ್ತೆಯೇ ಕುಸಿದು ಬಿದ್ದು ಹಲವಾರು ಕಾರು, ಬೈಕ್ ಮತ್ತು ತಳ್ಳುಗಾಡಿಗಳು ಸಹ ಜಖಂಗೊಂಡಿವೆ.

ಹೈದರಾಬಾದ್:  ನೀವೇನೇ ಹೇಳಿ, ಹೈದರಾಬಾದ್ (Hyderabad) ನಗರದಲ್ಲಿರುವ ರಸ್ತೆಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರಿನ (Bengaluru) ರಸ್ತೆಗಳೇ ಕೊಂಚ ಬೆಟರ್ ಅನಿಸುತ್ತದೆ. ಇಲ್ಲಿ ರಸ್ತೆ ಉದ್ದಗಲಕ್ಕೂ ಗುಂಡಿಗಳು ಬಿದ್ದಿರುವುದು ನಿಜವಾದರೂ ಪೂರ್ತಿ ರಸ್ತೆಗೆ ರಸ್ತೆಯೇ ಕುಸಿದುಬಿದ್ದ ಸಂದರ್ಭ ಇದುವರೆಗಂತೂ ಸೃಷ್ಟಿಯಾಗಿಲ್ಲ. ಹೈದರಾಬಾದ್ ಘೋಷ್ ಮಹಲ್ (Ghosh Mahal) ವ್ಯಾಪ್ತಿಯ ಚಕ್ನಾವಾಡಿಯಲ್ಲಿ ಪೂರ್ತಿ ರಸ್ತೆಯೇ ಕುಸಿದು ಬಿದ್ದು ಹಲವಾರು ಕಾರು, ಬೈಕ್ ಮತ್ತು ತಳ್ಳುಗಾಡಿಗಳು ಸಹ ಜಖಂಗೊಂಡಿವೆ. ಜನಕ್ಕೆ ಓಡಾಡಲು ರಸ್ತೆ ಇಲ್ಲದಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

Published on: Dec 23, 2022 05:00 PM