‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್ ಕೇಸ್ ಬಗ್ಗೆ ವಿಜಯ್ ರಾಘವೇಂದ್ರ ಮಾತು
ರೇಣುಕಾ ಸ್ವಾಮಿ ಹತ್ಯೆಯ ಬಳಿಕ ಚಿತ್ರರಂಗದಲ್ಲಿ ಒಂದು ಬೇಸರದ ಛಾಯೆ ಆವರಿಸಿದೆ. ‘ಆದಷ್ಟು ಬೇಗ ಈ ಕಹಿ ಪರಿಸ್ಥಿತಿಯಿಂದ ನಮ್ಮ ಚಿತ್ರರಂಗ ಹೊರಗಡೆ ಬರಲಿ, ಕರ್ನಾಟಕ ಹೊರಗಡೆ ಬರಲಿ’ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ದರ್ಶನ್ ಅವರು ಜೈಲು ಸೇರಿರುವುದು ತಮಗೆ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..
ನಟ ವಿಜಯ್ ರಾಘವೇಂದ್ರ ಅವರು ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ಒಂದು ಚಿಕ್ಕ ಕಾರಣದಿಂದ ರೇಣುಕಾಸ್ವಾಮಿಯ ಕೊಲೆ ನಡೆದುಹೋಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ದರ್ಶನ್, ಪವಿತ್ರಾ ಗೌಡ ಮತ್ತು ಅವರ ಸಹಚರರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಎಲ್ಲ ಘಟನೆಗಳ ಬಗ್ಗೆ ವಿಜಯ್ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲಿಗೆ ಎಲ್ಲರಿಗೂ ಶಾಕ್ ಆಯಿತು. ಬಳಿಕ ಏನೇನೋ ಕಥೆಗಳನ್ನು ಕೇಳಿ ಕುತೂಹಲ ಮೂಡಿದೆ. ಆಮೇಲೆ ಆಗುತ್ತಿರುವುದೆಲ್ಲ ನೋಡಿದಾಗ ಬೇಸರ ಆಗೋಕೆ ಶುರುವಾಯಿತು. ನಿಮಗೆ ಗೊತ್ತಿರುವುದಕ್ಕಿಂತ ಕಡಿಮೆ ವಿಚಾರ ನನಗೆ ಗೊತ್ತು. ಕಾನೂನು ಇದೆ. ಸಿನಿಮಾರಂಗದಲ್ಲಿ ನಮ್ಮದು ಒಂದು ಕುಟುಂಬ. ಆ ಕುಟುಂಬದಲ್ಲಿ ಬೇಸರ ಇದೆ. ಈ ಪರಿಸ್ಥಿತಿಗೆ ಬಲಿಯಾದ ಇನ್ನೊಂದು ಕುಟುಂಬ ಇದೆ. ಈ ಘಟನೆ ಆಗಿಹೋಗಿದೆ. ನಮ್ಮ ಸಿನಿಮಾರಂಗದ ಕುಟುಂಬದವರೇ ಆದ ದರ್ಶನ್ ಅವರು ಈ ರೀತಿಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬ ಬೇಸರ ನಮಗೆ ಇದೆ’ ಎಂದಿದ್ದಾರೆ ವಿಜಯ್ ರಾಘವೇಂದ್ರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
