‘ಆ ಜಾಗದಲ್ಲಿ ನಿಲ್ಲಲು ಶಿವಣ್ಣ ಸ್ಫೂರ್ತಿ’: ‘ಜೋಗ್​ 101’ ಘಟನೆ ವಿವರಿಸಿದ ವಿಜಯ್​ ರಾಘವೇಂದ್ರ

|

Updated on: Mar 03, 2024 | 8:21 PM

‘ಜೋಗ್​ 101’ ಸಿನಿಮಾದಲ್ಲಿ ವಿಜಯ್​ ರಾಘವೇಂದ್ರ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತೇಜಸ್ವಿನಿ ಶೇಖರ್​, ರಾಜೇಶ್​ ನಟರಂಗ, ಗೋವಿಂದೇ ಗೌಡ, ನಿರಂಜನ್​ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ತಿಲಕ್​ ಶೇಖರ್​, ಕಡ್ಡಿಪುಡಿ ಚಂದ್ರ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ಪಾತ್ರದ ಬಗ್ಗೆ ವಿಜಯ್​ ರಾಘವೇಂದ್ರ ಮಾತನಾಡಿದ್ದಾರೆ.

ನಟ ವಿಜಯ್​ ರಾಘವೇಂದ್ರ ಅವರು ‘ಜೋಗ್​ 101’ (Jog 101) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿದೆ. ಟ್ರೇಲರ್​ ರಿಲೀಸ್​ ಸಮಾರಂಭದಲ್ಲಿ ವಿಜಯ್ ರಾಘವೇಂದ್ರ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದ ಚಿತ್ರೀಕರಣ ಜೋಗ ಜಲತಾಪದ ಸುತ್ತಮುತ್ತ ಮಾಡಲಾಗಿದೆ. ಅದು ಅಪಾಯಕಾರಿ ಜಾಗ. ಅಂಥ ಜಾಗದಲ್ಲಿ ನಿಂತುಕೊಳ್ಳಲು ತಮಗೆ ಶಿವರಾಜ್​ಕುಮಾರ್ (Shivarajkumar) ಸ್ಫೂರ್ತಿ ಎಂದು ವಿಜಯ್​ ರಾಘವೇಂದ್ರ ಹೇಳಿದ್ದಾರೆ. ‘ಟ್ರೇಲರ್​ನಲ್ಲಿ ನಾವು ಹಿಂಟ್​ ನೀಡಿದ್ದೇವೆ. ಇದು ಆ್ಯಕ್ಷನ್​-ಸಸ್ಪೆನ್ಸ್​-ಥ್ರಿಲ್ಲರ್​ ಸಿನಿಮಾ. ಜೋಗ ಜಲಪಾತದಲ್ಲಿ ನಾನು ನಿಂತಿದ್ದ ಜಾಗದ ಬಗ್ಗೆ ಒಂದು ಅನುಭವ ಇದೆ. ಅಲ್ಲಿ ನಿಂತುಕೊಂಡರೆ ಎಂಥವರನ್ನೂ ನಡುಗಿಸುತ್ತದೆ. ನನ್ನ ಎದೆಬಡಿತವನ್ನು ನಾನೇ ಕಂಟ್ರೋಲ್​ಗೆ​ ತೆಗೆದುಕೊಳ್ಳಬೇಕಾಯ್ತು. ಅದಕ್ಕೆ ಶಿವಣ್ಣ ನನಗೆ ಸ್ಫೂರ್ತಿ’ ಎಂದಿದ್ದಾರೆ ವಿಜಯ್ ರಾಘವೇಂದ್ರ (Vijay Raghavendra). ಈ ಸಿನಿಮಾಗೆ ವಿಜಯ್​ ಕನ್ನಡಿಗ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ರಾಘು ಅವರು ಕ್ರಿಯೇಟಿವ್​ ಡೈರೆಕ್ಟರ್​ ಆಗಿಯೂ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.